ಸಂತೋಷ್ ಪಾಟೀಲ್ ಮೊಬೈಲ್ ನಲ್ಲಿತ್ತು 88 ಮಿಸ್ಡ್ ಕಾಲ್?
ಉಡುಪಿ: ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ಕುರಿತಂತೆ ಹಲವಾರು ಸಂಗತಿಗಳು ಇದೀಗ ಬಯಲಾಗುತ್ತಿವೆ.
ಪ್ರಶಾಂತ್ ಹಾಗೂ ಮೇದಪ್ಪನವರೊಂದಿಗೆ ಪ್ರವಾಸದ ನೆಪದಲ್ಲಿ ಉಡುಪಿಗೆ ಆಗಮಿಸಿದ್ದ ಸಂತೋಷ್ ಪಾಟೀಲ್, ಎರಡು ರೂಮ್ ಬುಕ್ ಮಾಡಿಕೊಂಡಿದ್ದರು. ಸ್ನೇಹಿತರು ಒಂದೇ ರೂಮ್ ಸಾಕು ಎಂದಾಗ, ಇನ್ನೊಬ್ಬರು ಬರಲಿದ್ದಾರೆ, ಎಂದು ನಂಬಿಸಿದ್ದರೆನ್ನಲಾಗಿದೆ.
ಸ್ನೇಹಿತರ ಜೊತೆಗೆ ಹೊರಗೆ ಹೋದಾಗ ನನಗೆ ಹೊಟ್ಟೆ ನೋವಾಗುತ್ತಿದೆ. ಹಾಗಾಗಿ ಊಟ ಬೇಡ ಜ್ಯೂಸ್ ಬೇಕು ಎಂದು ಹೇಳಿ ಪಾರ್ಸೆಲ್ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಮಾಧ್ಯಮಗಳಿಗೆ ಹಾಗೂ ತಮ್ಮ ಸ್ನೇಹಿತರಿಗೆ ಸಂತೋಷ್ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ. ಹೀಗಾಗಿಯೋ ಏನೋ ಅವರ ಮೊಬೈಲ್ ನಲ್ಲಿ ಬರೋಬ್ಬರಿ 88 ಮಿಸ್ಟ್ ಕಾಲ್ ಗಳಿದ್ದವು ಎಂದು ಹೇಳಲಾಗಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಸಂತೋಷ್ ಡೆತ್ ನೋಟ್ ನಲ್ಲಿ ಹೇಳಿದ್ದಾರೆ. ಆದರೆ ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ಸಹಿತ ಬಿಜೆಪಿ ಪಾಳಯ ಕೆ.ಎಸ್.ಈಶ್ವರಪ್ಪನವರ ಪರ ಬ್ಯಾಟಿಂಗ್ ಆರಂಭಿಸಿದ್ದು, ತನಿಖೆ ನ್ಯಾಯಯುತವಾಗಿ ನಡೆಯುತ್ತಾ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಸಭ್ಯ ವರ್ತನೆ: ಉಪನ್ಯಾಸಕನಿಗೆ ಸ್ಟಾಪ್ ರೂಮ್ ನಲ್ಲಿ ಹಿಗ್ಗಾಮುಗ್ಗಾ ಥಳಿತ!
ಎಸ್ಸಿ-ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ, ದಿಂಬುಗಳಲ್ಲಿಯೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ | ಬೊಮ್ಮಾಯಿ ವಾಗ್ದಾಳಿ
ಊಟವಾದ ತಕ್ಷಣ ಕೋಲ್ಡ್ ವಾಟರ್ ಕುಡಿಯ ಬಾರದು ಯಾಕೆ ಗೊತ್ತಾ?
ತಂದೆ ಹಾವನ್ನು ಹೊಡೆದು ಕೊಂದ ಕೆಲವೇ ಗಂಟೆಗಳಲ್ಲಿ ಪುತ್ರನನ್ನು ಕಚ್ಚಿ ಕೊಂದ ಇನ್ನೊಂದು ಹಾವು