ಜಾಮೀನಿನ ಮೇಲೆ ಹೊರ ಬಂದು ಸಂತ್ರಸ್ತ ಯುವತಿಯ ಮೇಲೆ ಮತ್ತೆ ಅತ್ಯಾಚಾರ ನಡೆಸಿದ! - Mahanayaka
4:11 PM Thursday 12 - December 2024

ಜಾಮೀನಿನ ಮೇಲೆ ಹೊರ ಬಂದು ಸಂತ್ರಸ್ತ ಯುವತಿಯ ಮೇಲೆ ಮತ್ತೆ ಅತ್ಯಾಚಾರ ನಡೆಸಿದ!

jaipura
15/06/2021

ಜೈಪುರ: ಅತ್ಯಾಚಾರ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತೆ ಅದೇ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ  ಸೋಮವಾರ ರಾತ್ರಿ ನಡೆದಿದೆ.

ಜೈಪುರದ ಬಾಗ್ರು ಎಂಬಲ್ಲಿರುವ ತನ್ನ ಮನೆಗೆ ಯುವತಿಯನ್ನು ಹೊತ್ತೊಯ್ದ ಆರೋಪಿ ಅಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಯುವತಿಯನ್ನು ರಕ್ಷಿಸಲಾಗಿದೆ ಎಂದು ಕಾರ್ಧನಿ ಪೊಲೀಸ್‌ ಠಾಣೆ ಅಧಿಕಾರಿ ರಾಜೇಶ್ ಬಾಪ್ನಾ ಹೇಳಿದ್ದಾರೆ.

ಈ ಮೊದಲು ಇದೇ ಆರೋಪಿಯ ವಿರುದ್ಧ ಇದೇ ಯುವತಿ ಅಪಹರಣ ಮತ್ತು ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ಚಾರ್ಜ್‌ಶೀಟ್‌ ಅನ್ನೂ ಸಲ್ಲಿಸಿದ್ದರು. ಆರೋಪಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ.

ಇತ್ತೀಚಿನ ಸುದ್ದಿ