ಸ್ಯಾಂಟ್ರೋ ರವಿ ಕೇಸ್: ಪೊಲೀಸರು ತನಿಖೆ ಮಾಡಿದರೆ ನಿಜಾಂಶ ಹೊರಬರಲ್ಲ: ಆರ್.ಧ್ರುವನಾರಾಯಣ
ಚಾಮರಾಜನಗರ: ಸ್ಯಾಂಟ್ರೋ ರವಿ ಇಷ್ಟು ದಿನಗಳಾದರೂ ಸಿಕ್ಕಿ ಬೀಳದಿರಲು ಪ್ರಭಾವಿಗಳ ರಕ್ಷಣೆ ಇರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಂಶಯ ಹೊರಹಾಕಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸ್ಯಾಂಟ್ರೋ ರವಿಯನ್ನು ಕೂಡಲೇ ಬಂಧಿಸಬೇಕು. ಬಡ ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಮಾಡುತ್ತಿದ್ದ ವಿಷಜಂತುವನ್ನು ಇಷ್ಟು ದಿನ ಬಂಧಿಸದಿರುವುದು ಗೃಹ ಇಲಾಖೆಯ ವೈಫಲ್ಯ ತೋರಿಸುತ್ತಿದೆ ಎಂದು ಕಿಡಿಕಾರಿದರು.
ಸ್ಯಾಂಟ್ರೋ ರವಿ ಜೊತೆಗೆ ಪ್ರಭಾವಿಗಳು, ಮಂತ್ರಿಗಳ ಸಖ್ಯ ಹೊಂದಿರುವ ಆರೋಪ ಇರುವುದರಿಂದ ಪೊಲೀಸರು ತನಿಖೆ ಮಾಡಿದರೆ ನಿಜಾಂಶ ಹೊರಬರುವುದಿಲ್ಲ, ಪ್ರಭಾವಿಗಳ ರಕ್ಷಣೆಯಿಂದ ಇಷ್ಟು ದಿನಗಳ ಕಾಲ ಆತನ ಬಂಧನವಾಗಿಲ್ಲ. ಆದ್ದರಿಂದ, ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
600ರಲ್ಲಿ 60 ಈಡೇರಿಲ್ಲ:
ಬಸ್ ಯಾತ್ರೆ, ಕಾಂಗ್ರೆಸ್ ಬಗ್ಗೆ ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ. ಒಂದು ವೇಳೆ, ಬಿಜೆಪಿಯವರಿಗೆ ನೈತಿಕತೆ ಇದ್ದರೇ ಅವರು ಕೊಟ್ಟ ಭರವಸೆಯಲ್ಲಿ ಎಷ್ಟು ಕಾರ್ಯಕ್ರಮ ಈಡೇರಿಸಿದ್ದಾರೆಂಬ ಪಟ್ಟಿ ಕೊಡಲಿ. ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದರು. ಆದರೆ, 60 ಭರವಸೆಯೂ ಈಡೇರಿಲ್ಲ ಎಂದು ಟೀಕಿಸಿದರು.
ಜನರು ಬಿಜೆಪಿ ಆಡಳಿತ ಗಮನಿಸಿದ್ದು ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ, ಜನಪರ ಆಡಳಿತ ನೀಡುವ ಬದಲು ಜನರ ಗಮನ ಬೇರೆಡೆ ಸೆಳೆಯುವ ಬಿಜೆಪಿಗೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ಹೊರಹಾಕಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw