ಸ್ಯಾಂಟ್ರೋ ರವಿ ಹಾಗೂ ಬಿಜೆಪಿ ಸಚಿವರ ಕುಟುಂಬಸ್ಥರ ನಂಟಿನ ಬಗ್ಗೆ ಯಾಕೆ ಮಾತನಾಡಲ್ಲ: ಯು.ಟಿ.ಖಾದರ್ ಪ್ರಶ್ನೆ
ಕಂತೆ ಕಂತೆ ನೋಟುಗಳನ್ನು ಹರಡಿ ಸೆಲ್ಫಿ ತೆಗೆದುಕೊಂಡು ಹಲ್ಲು ಕಿರಿಯುವ ವಿವಿಧ ದಂಧೆಯ ಕಿಂಗ್ ಪಿನ್ ಸ್ಯಾಂಟ್ರೋ ರವಿ ಹಾಗೂ ಬಿಜೆಪಿ ಸಚಿವರ, ಕುಟುಂಬಸ್ಥರ ಜೊತೆ ಇರುವ ನಂಟಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ, ಶಾಸಕ ಯು.ಟಿ.ಖಾದರ್ ಸರಕಾರವನ್ನು ಪ್ರಶ್ನಿಸಿದ್ದಾರೆ.
ಭಯೋತ್ಪಾದಕರ ಜೊತೆಗೆ ನಂಟು ಹೊಂದಿರುವ ಆರೋಪ ಇರೋ ರೇಶನ್ ತಂದೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಖಾದರ್ ಜೊತೆಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಬಿಜೆಪಿ ವೈರಲ್ ಮಾಡಿ ವ್ಯಂಗ್ಯ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಖಾದರ್, ಎನ್ ಐಎ ಬಂಧಿತ ರಿಶಾನ್ ಶೇಕ್ ಎಂಬಾತನ ತಂದೆಯ ಜೊತೆಯಲ್ಲಿ ಇರುವ ಫೋಟೊವನ್ನು ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಬೇಧಿ ಮಾಡುತ್ತಿದ್ದಾರೆ.
ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರದ ಅಧೀನದಲ್ಲಿರುವ ಎನ್ ಐಎ ಈ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಿ ತಪ್ಪೆಸಗಿದರೆ ಕಠಿಣ ಕ್ರಮಕೈಗೊಳ್ಳಲಿ ಎಂದು ಸವಾಲು ಎಸೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw