“ಸ್ಯಾಂಟ್ರೋ ರವಿ ಸರ್ಕಾರದ ಬ್ರೋಕರ್: ಭಯೋತ್ಪಾದನೆ ಪ್ರಕರಣದಂತೆ ಇದು ಭಯಾನಕ” - Mahanayaka

“ಸ್ಯಾಂಟ್ರೋ ರವಿ ಸರ್ಕಾರದ ಬ್ರೋಕರ್: ಭಯೋತ್ಪಾದನೆ ಪ್ರಕರಣದಂತೆ ಇದು ಭಯಾನಕ”

santro ravi
10/01/2023

ಬೆಂಗಳೂರು: ಸ್ಯಾಂಟ್ರೋ ರವಿ ವಿಚಾರಕ್ಕೆ ಸಂಬಂಧಿಸಿದಂತೆ  ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿಯನ್ನು ತರಾಟೆಗೆತ್ತಿಕೊಂಡಿದ್ದು, ಪೊಲೀಸರು ಸ್ಯಾಂಟ್ರೋ ರವಿ ಬಗ್ಗೆ ತನಿಖೆ ನಡೆಸುತ್ತಾರಾ? ಅಂತ ಪ್ರಶ್ನಿಸಿದ್ದಾರೆ.


Provided by

ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರವಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. “ಪೊಲೀಸರಿಂದ ನ್ಯಾಯಯುತ ತನಿಖೆಯನ್ನು ಯಾರಾದರೂ ಹೇಗೆ ನಿರೀಕ್ಷಿಸಬಹುದೇ? ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಪ್ರಕರಣವು ಭಯೋತ್ಪಾದನೆ ಪ್ರಕರಣದಂತೆಯೇ ಭಯಾನಕವಾಗಿದ್ದು, ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Provided by

ಈ ನಡುವೆ ರವಿಯನ್ನು ಬಂಧಿಸುವಲ್ಲಿ ವಿಫಲವಾದ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸ್ಯಾಂಟ್ರೋ ರವಿ ಸರ್ಕಾರದ ‘ಚೀಫ್ ಬ್ರೋಕರ್ ಎಂದು ಕರೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ