ಸರಗಳ್ಳರ ದುಷ್ಕೃತ್ಯದಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ!
15/06/2021
ಕುಣಿಗಲ್: ಸರಗಳ್ಳತನಕ್ಕಾಗಿ ಕಳ್ಳರು ನಡೆಸಿದ ಕೃತ್ಯದಿಂದ ಮಹಿಳೆಯ ಪ್ರಾಣವೇ ಹಾರಿ ಹೋಗಿದ್ದು, ತವರಿನಿಂದ ಗಂಡನ ಮನೆಗೆ ಬರುತ್ತಿದ್ದ ಮಹಿಳೆಯ ಮೇಲೆ ಸರಗಳ್ಳರು ಏಕಾಏಕಿ ದಾಳಿ ನಡೆಸಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ.
38 ವರ್ಷ ವಯಸ್ಸಿನ ವಸಂತಾ ಎಂಬವರು ಮೃತಪಟ್ಟವರಾಗಿದ್ದು, ಲಾಕ್ ಡೌನ್ ಗೂ ಮೊದಲು ಅವರು ತಾಲೂಕಿನ ಹಂದಲಗೆರೆಯ ತಮ್ಮ ತವರು ಮನೆಗೆ ಹೋಗಿದ್ದರು. ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಪತಿಯ ಮನೆಗೆ ತನ್ನ ಮಗನ ಬೈಕ್ ನಲ್ಲಿ ಬರುತ್ತಿದ್ದರು.
ತುಮಕೂರು ರಾಮನಗರ ಜಿಲ್ಲಾ ಗಡಿ ಪ್ರದೇಶದ ಮೇದರದೊಡ್ಡಿ ಬಳಿಯಲ್ಲಿ ಕಳ್ಳರಿಬ್ಬರು ಹಿಂಬದಿಯಿಂದ ಬಂದು ವಸಂತಾ ಅವರ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಎಳೆದಿದ್ದಾರೆ. ಈ ವೇಳೆ ಬೈಕ್ ನಲ್ಲಿ ಕುಳಿತಿದ್ದ ವಸಂತ ಅವರು ಆಯ ತಪ್ಪಿ ನೆಲಕ್ಕೆ ಬಿದ್ದಿದ್ದು, ತಲೆಗೆ ತೀವ್ರವಾದ ಏಟು ತಗಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.