ಸರಗಳ್ಳರನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರು! - Mahanayaka
1:19 PM Sunday 14 - September 2025

ಸರಗಳ್ಳರನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರು!

bangalore police
06/07/2021

ಬೆಂಗಳೂರು:  ಸರಗಳ್ಳತನ ಪ್ರಕರಣವನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಎಟಿಎಂ ಕಳ್ಳರು ಸಿಕ್ಕಿ ಬಿದ್ದಿದ್ದು,  ಒಂದು ಪ್ರಕರಣದ ತನಿಖೆಯ ವೇಳೆ ಇನ್ನೊಂದು ಪ್ರಕರಣದ ಆರೋಪಿಗಳನ್ನು ಬಂಧಿಸಿದ ಅಚ್ಚರಿಯ ಘಟನೆ ನಡೆದಿದೆ.


Provided by

ಕಳೆದ ಕೆಲವು ದಿನಗಳ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಸರ ಕಳವು ನಡೆದಿತ್ತು. ಈ ಸರಗಳ್ಳರನ್ನು ಬಂಧಿಸಲು ಪೊಲೀಸರು ಸುಮಾರು ನೂರಾರು ಸಿಸಿ ಕ್ಯಾಮರಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಿಸಿ ಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿರುವ ವೇಳೆ ಎಟಿಎಂ ಯಂತ್ರ ಒಡೆದು ಕಳ್ಳತನ ನಡೆಸಲು ಪ್ರಯತ್ನಿಸಿರುವ ಇಬ್ಬರು ವ್ಯಕ್ತಿಗಳು ಸುಳಿವು ಸಿಸಿ ಕ್ಯಾಮರದಿಂದ ತಿಳಿದು ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದ್ದು, ಈ ವೇಳೆ ಎಟಿಎಂ ಕಳವಿಗೆ ಯತ್ನ ಪ್ರಕರಣ ಬೆಳಕಿಗೆ ಬಂದಿದೆ.

ತುರುವೇಕೆರೆ ಮೂಲದ ರವಿ ಆಚಾರ್ಯ ಹಾಗೂ ತಲಘಟ್ಟಪುರದ ನಿವಾಸಿ ರಾಹುಲ್ ಬಂಧಿತ ಆರೋಪಿಗಳಾಗಿದ್ದು, ತುರುವೇಕೆರೆ ಮೂಲದ ರವಿ ಬೆಂಗಳೂರಿನಲ್ಲಿ ಮೊಬೈಲ್ ರಿಪೇರಿ ಅಂಗಡಿ ತೆರೆದಿದ್ದ. ರಾಹುಲ್ ಕುಡಿಯುವ ನೀರಿನ ವಾಟರ್ ಪ್ಲಾಂಟ್ ನಡೆಸುತ್ತಿದ್ದ. ಕೊರೊನಾ ಲಾಕ ಡೌನ್ ನಿಂದಾಗಿ ನಷ್ಟ ಅನುಭವಿಸಿದ್ದರು. ಸಾಲ ತೀರಿಸಲಾಗದೇ ಕಳ್ಳತನ ಮಾಡಿ ಶ್ರೀಮಂತರಾಗಲು ಪ್ಲಾನ್ ರೂಪಿಸಿದ್ದರು.

ಗ್ರಾಮೀಣ ಭಾಗದ ಎಟಿಎಂ ಯಂತ್ರಗಳ ಮೇಲೆ ಕಣ್ಣಿಟ್ಟ ಆರೋಪಿಗಳು, ಗ್ಯಾಸ್ ಕಟರ್ ಮೂಲಕ ಪಾಂಡವಪುರದಲ್ಲಿ ಎಟಿಎಂ ಯಂತ್ರವನ್ನು ಕತ್ತರಿಸಲು ಯತ್ನಿಸಿದ್ದರು. ಎಟಿಎಂ ಸೈರನ್ ಬಳಿಕ ಎಚ್ಚೆತ್ತು ಅಲ್ಲಿಂದ ಪರಾರಿಯಾಗಿದ್ದರು. ಎಟಿಎಂನನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲು ಯತ್ನಿಸಿ ಕೈಯಲ್ಲಾಗದೇ ವಾಪಸು ಬಂದಿರುವ ಘಟನೆ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಸರ ಅಪರಹಣ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಪಾಂಡವಪುರದ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ