ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಇಲ್ಲ | ಬಾಂಬೆ ಹೈಕೋರ್ಟ್

bombay high court
17/02/2022

ಮುಂಬೈ: ಮೊದಲ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದೇ ಎರಡನೇ ವಿವಾಹ ನಡೆದ ಪ್ರಕರಣಗಳಲ್ಲಿ ಎರಡನೇ ಪತ್ನಿ ತನ್ನ ಮೃತ ಪತಿಯ ಪಿಂಚಣಿ ಪಡೆಯಲು ಅರ್ಹಳಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಪಿಂಚಣಿ ಸೌಲಭ್ಯಗಳನ್ನು ನಿರಾಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೊಲ್ಲಾಪುರ ನಿವಾಸಿ ಶ್ಯಾಮಲ್ ಟೇಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಜೆ.ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರ ವಿಭಾಗೀಯ ಪೀಠ ಬುಧವಾರ ವಜಾಗೊಳಿಸಿದೆ.

ಸೋಲಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ಯೂನ್ ಆಗಿದ್ದ ಟೇಟ್ ಅವರ ಪತಿ ಮಹದೇವು 1996 ರಲ್ಲಿ ನಿಧನರಾದರು. ಮಹದೇವು ಅರ್ಜಿದಾರರನ್ನು ವಿವಾಹವಾದಾಗ ಈಗಾಗಲೇ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ಅವರ ಮರಣದ ನಂತರ, ಟೇಟ್ ಮತ್ತು ಮಹದೇವ್ ಅವರ ಮೊದಲ ಪತ್ನಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಮಹದೇವು ಅವರ ಮೊದಲ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ, ಇನ್ನು ಮುಂದೆ ಮಹದೇವು ಅವರ ಪಿಂಚಣಿ ಬಾಕಿಯನ್ನು ನೀಡುವಂತೆ ಕೋರಿ ಶ್ರೀಮತಿ ಟೇಟ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರವು 2007 ಮತ್ತು 2014 ರ ನಡುವೆ ಟೇಟ್ ಅವರ ನಾಲ್ಕು ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ವಿಚಾರವಾಗಿ 2019 ರಲ್ಲಿ ಟೇಟ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮಾತ್ರ ಕುಟುಂಬ ಪಿಂಚಣಿಗೆ ಅರ್ಹಳು ಎಂಬ ರಾಜ್ಯ ಸರ್ಕಾರದ ವಾದ ಸರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಾಗಟೆ, ಗಂಟೆಯಿಂದ ಶಬ್ದ ಮಾಲಿನ್ಯ: ಆದೇಶ ವಾಪಸ್ ಪಡೆಯಲಾಗಿದೆ | ಅರಗ ಜ್ಞಾನೇಂದ್ರ 

ಮುಸ್ಲಿಂ ವೇಷ ಧರಿಸಿ ಅನುಮಾಸ್ಪದ ರೀತಿ ಓಡಾಟ: ಆರು ಮಂದಿ ಹಿಂದೂ ಧರ್ಮೀಯರು ಪೊಲೀಸ್‌ ವಶಕ್ಕೆ

ಮದುವೆ ಸಂಭ್ರಮದ ವೇಳೆ ಒಂದು ಕ್ಷಣದಲ್ಲೇ ನಡೆದಿತ್ತು ದುರಂತ: 13 ಮಂದಿಯ ದಾರುಣ ಸಾವು

13 ಅಪ್ರಾಪ್ತ ವಿದ್ಯಾರ್ಥಿನಿಯರ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಹಾಡ ಹಗಲೇ ಯುವತಿಯ ಕತ್ತು ಸೀಳಿದ ಪಾಗಲ್ ಪ್ರೇಮಿ!

 

ಇತ್ತೀಚಿನ ಸುದ್ದಿ

Exit mobile version