ಬಿಜೆಪಿ ಸಚಿವರ ಕಾರು ಓವರ್ ಟೇಕ್ ಮಾಡಿದ ಚಾಲಕರಿಗೆ ಎಂತಹ ಶಿಕ್ಷೆ ನೀಡಲಾಗಿದೆ ನೋಡಿ - Mahanayaka
5:06 PM Wednesday 11 - December 2024

ಬಿಜೆಪಿ ಸಚಿವರ ಕಾರು ಓವರ್ ಟೇಕ್ ಮಾಡಿದ ಚಾಲಕರಿಗೆ ಎಂತಹ ಶಿಕ್ಷೆ ನೀಡಲಾಗಿದೆ ನೋಡಿ

22/02/2021

ಭುವನೇಶ್ವರ: ಬಿಜೆಪಿಯ ಸರಳ ಜೀವಿ ಎಂಎಸ್ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ನ್ನು ಗೊತ್ತಿಲ್ಲದೇ ಓವರ್ ಟೇಕ್ ಮಾಡಿದ್ದಕ್ಕೆ ಎರಡು ಕಾರುಗಳನ್ನು  20 ಕಿ.ಮೀ. ಹಿಂಬಾಲಿಸಿ ತಡೆ ಹಿಡಿದು, ಐದು ಗಂಟೆಗಳವರೆಗೆ ಪೊಲೀಸ್ ಠಾಣೆಯಲ್ಲಿ ಕೂರಿಸಿ ದಂಡ ವಿಧಿಸಿದ ಅಮಾನವೀಯ ಘಟನೆ ಒಡಿಶಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ನಡೆದಿದೆ.

ಬಡ ಮಕ್ಕಳಿಗೆ ಸೈಕಲ್ ನಲ್ಲಿ ಹೋಗಿ ಬನ್ ಹಂಚಿ ಫೇಮಸ್ ಆಗಿದ್ದ ಸಚಿವ ಸಾರಂಗಿ ಅವರು ಸಚಿವರಾದ ಬಳಿಕ ಬದಲಾಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಕಾರುಗಳನ್ನು ಓವರ್ ಟೇಕ್ ಮಾಡಿದ್ದಕ್ಕೆ ಎರಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬಗಳಿಗೆ ತೊಂದರೆಯನ್ನುಂಟು ಮಾಡಲಾಗಿದೆ.

ಕೋಲ್ಕತ್ತಾ ಮೂಲದ ಸಂತೋಷ್ ತಮ್ಮ ಸಹೋದರ ಹಾಗೂ ಪತ್ನಿ ಹಾಗೂ ಮಕ್ಕಳೊಂದಿಗೆ  ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರುಗಳಲ್ಲಿ ತೆರಳಿದ್ದಾರೆ.  ಸಂತೋಷ್ ಅವರ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಹಾಕಿದ್ದಾರೆ. ಆದರೆ ಈ ಹಾರ್ನ್ ಅವರಿಗೆ ಕೇಳಿಲ್ಲ. ಅವರು ಗೊತ್ತಿಲ್ಲದೇ ಕಾರನ್ನು ಓವರ್ ಟೇಕ್ ಮಾಡಿ ಹೋಗಿದ್ದಾರೆ.

ಸುಮಾರು 20 ಕಿ.ಮೀ. ಸಾಗಿದಾಗ ಅವರಿಗೆ ಸೈರನ್ ಶಬ್ದ ಕೇಳಿಸಿದೆ.  ಆ್ಯಂಬುಲೆನ್ಸ್ ಇರಬಹುದು ಎಂದು ಕೊಂಡು ಸೈಡ್ ನೀಡಿದಾಗ ಅದು ಸಚಿವರ ಎಸ್ಕಾರ್ಟ್ ಸಿಬ್ಬಂದಿ ವಾಹನವಾಗಿತ್ತು.  ಅಲ್ಲಿಂದ ಠಾಣೆಗೆ ಕರೆದುಕೊಂಡು ಬಂದು 5 ಗಂಟೆಗಳ ಕಾಲ ಠಾಣೆಯಲ್ಲಿಯೇ ಕಳೆಯುವಂತೆ ಮಾಡಿ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಚಾಲಕರು ಹಾಗೂ ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ. ಸಚಿವರ ಕಾರು ಓವರ್ ಟೇಕ್ ಮಾಡಬಾರದು ಎಂದು ನಮಗೆ ಗೊತ್ತಿರಲಿಲ್ಲ ಮತ್ತು ಅದು ಸಚಿವರ ಕಾರು ಎಂದೂ ನಮಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

sarangi

ಇತ್ತೀಚಿನ ಸುದ್ದಿ