ಮೂರು ಲಾರಿ ಒಂದು ಕಾರಿನ ನಡುವೆ ಭೀಕರ ಸರಣಿ ಅಪಘಾತ | ಇಬ್ಬರ ದಾರುಣ ಸಾವು - Mahanayaka

ಮೂರು ಲಾರಿ ಒಂದು ಕಾರಿನ ನಡುವೆ ಭೀಕರ ಸರಣಿ ಅಪಘಾತ | ಇಬ್ಬರ ದಾರುಣ ಸಾವು

05/02/2021

ರಾಯಚೂರು: ಮೂರು ಲಾರಿ ಮತ್ತು ಒಂದು ಕಾರಿನ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟ ದಾರಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿ ನಡೆದಿದೆ.


Provided by

ಎರಡು ಲಾರಿಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಲಾರಿಯೊಂದರ ಹಿಂದೆ ಬರುತ್ತಿದ್ದ ಕಾರಿಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಅಪ್ಪಳಿಸಿದ್ದು,  ಕಾರಿನಲ್ಲಿದ್ದ 18 ವರ್ಷ ವಯಸ್ಸಿನ ಹರ್ಷಿತಾ ಹಾಗೂ 16 ವರ್ಷದ ಭುವನ್ ಎಂಬವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾ ಜನಕ ಎಂದು ತಿಳಿದು ಬಂದಿದೆ.  ಘಟನಾ ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ