ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಸೀರೆ: ವಿ.ಆರ್.ಎಲ್. ಲಾಜಿಸ್ಟಿಕ್ಸ್ ಗೋದಾಮಿಗೆ ಪೊಲೀಸರಿಂದ ದಾಳಿ

ಚಿಕ್ಕಮಗಳೂರು: ವಿ.ಆರ್.ಎಲ್. ಲಾಜಿಸ್ಟಿಕ್ಸ್ ಗೋದಾಮಿನ ಮೇಲೆ ಪೊಲೀಸರ ದಾಳಿ ನಡೆಸಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾವಿರಾರು ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತದಾರರಿಗೆ ಹಂಚಲು ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಮೂಲಕ ಸೀರೆ ತರಿಸಲಾಗಿತ್ತು. ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ಲಕ್ಷಾಂತರ ಮೌಲ್ಯದ ಸೀರೆಗಳನ್ನು ತರಿಸಲಾಗಿತ್ತು.
ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂದನ್ ಕುಮಾರ್ ಜೈನ್ ಎಂಬ ಹೆಸರಿನಲ್ಲಿ ಸೀರೆಗಳು ಬಂದಿದ್ದವು. ಸೂರತ್ ನ ಸ್ಯಾರಿ ಫ್ಯಾಕ್ಟರಿಯಿಂದ ಸೀರೆಗಳನ್ನು ತರಿಸಲಾಗಿತ್ತು.
ಚಿಕ್ಕಮಗಳೂರಿನ ಜಯನಗರದಲ್ಲಿರುವ ವಿ.ಆರ್.ಎಲ್. ಲಾಜಿಸ್ಟಿಕ್ಸ್ ಗೋದಾಮಿಗೆ ಸೀರೆಗಳನ್ನು ತರಿಸಲಾಗಿತ್ತು. ಸೂರತ್ ಸ್ಯಾರಿ ಫ್ಯಾಕ್ಟರಿಗೆ ಫೋನ್ ಮಾಡಿದರು ಸರಿಯಾಗಿ ಮಾಹಿತಿ ಸಿಗಲಿಲ್ಲ, ಚಂದನ್ ಕುಮಾರ್ ಜೈನ್ ಎಂಬ ವ್ಯಕ್ತಿ ಪೊಲೀಸರು, ಅಧಿಕಾರಿಗಳಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw