ಸಾರಿಗೆ ಬಸ್ ಗಳ ನಡುವೆ ಅಪಘಾತ: ಐವರು ಸಾವು, 30ಕ್ಕೂ ಅಧಿಕ ಮಂದಿ ಗಂಭೀರ - Mahanayaka

ಸಾರಿಗೆ ಬಸ್ ಗಳ ನಡುವೆ ಅಪಘಾತ: ಐವರು ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

amarawati
29/03/2021

ಅಮರಾವತಿ: ಎರಡು ಸಾರಿಗೆ ಸಂಸ್ಥೆಗಳ ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಐವರು ಮೃತಪಟ್ಟು, 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಸುಂಕರೆ ಪೆಟಾದಲ್ಲಿ ನಡೆದಿದೆ.

ಮುಂದೆ ಹೋಗುತ್ತಿದ್ದ ಸಾರಿಗೆ ಬಸ್ ಗೆ ಹಿಂದಿನಿಂದ ಬಂದ ಇನ್ನೊಂದು ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿದೆ.  ಏಕಾಏಕಿ ಡಿಕ್ಕಿ ಸಂಭವಿಸಿದ್ದರಿಂದ ಹಿಂದೆ ಇದ್ದ ಬಸ್ ಗೆ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ರಸ್ತೆ ಬದಿಯಲ್ಲಿ ತ್ಯಾಜ್ಯಗಳಿಗೆ ಬೆಂಕಿ ಹಾಕಲಾಗಿತ್ತು. ಇದರಿಂದಾಗಿ ದಟ್ಟ ಹೊಗೆ ವ್ಯಾಪಿಸಿತ್ತು. ಹೊಗೆಯಿಂದಾಗಿ ಒಂದು ವಾಹನ ಇನ್ನೊಂದು ವಾಹನಕ್ಕೆ ಸರಿಯಾಗಿ ಕಾಣದೇ ಇರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಸಂದರ್ಭ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಸ್ಥಳಕ್ಕೆ ತಕ್ಷಣವೇ ಆ್ಯಂಬುಲೆನ್ಸ್ ಮಾಡಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ