ಸಿನಿಮಾದಲ್ಲಿ ಕುಡಿಯೋದು ಸೇದುವುದು ತಪ್ಪಾದರೆ, ಅನುಮತಿ ನೀಡಿರುವ ಸರ್ಕಾರ ಸರಿಯೇ? | ನಟ ಉಪೇಂದ್ರ ಪ್ರಶ್ನೆ - Mahanayaka
1:12 AM Wednesday 11 - December 2024

ಸಿನಿಮಾದಲ್ಲಿ ಕುಡಿಯೋದು ಸೇದುವುದು ತಪ್ಪಾದರೆ, ಅನುಮತಿ ನೀಡಿರುವ ಸರ್ಕಾರ ಸರಿಯೇ? | ನಟ ಉಪೇಂದ್ರ ಪ್ರಶ್ನೆ

upendra
22/04/2022

ಸಿನಿಮಾದಲ್ಲಿ ಸಿಗರೇಟ್ ಸೇದೋದು, ಕುಡಿಯೋದು, ಜೂಜಿಗೆ ಜಾಹೀರಾತು ನೀಡೋದು ತಪ್ಪು ಆದರೆ ಇದಕ್ಕೆ ಅವಕಾಶ ನೀಡಿರುವ ಸರ್ಕಾರ ಸರಿಯೇ ಎಂದು ಕನ್ನಡ ಚಲನ ಚಿತ್ರ ನಟ ಉಪೇಂದ್ರ(Upendra Rao) ಟ್ವೀಟ್ ಮಾಡಿದ್ದಾರೆ.

ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು….. ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ…… ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು ! ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ನಟ ಅಕ್ಷಯ್ ಕುಮಾರ್(Akshay Kumar) ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ನಿನ್ನೆಯಷ್ಟೇ ಕ್ಷಮೆಯಾಚಿಸಿದ್ದರು. ಇದರ ಬೆನ್ನಲ್ಲೇ ನಟ ಉಪೇಂದ್ರ ಅವರು,  ಸರ್ಕಾರ ಸಿಗರೇಟ್ ಸೇದೋದಕ್ಕೆ, ಕುಡಿಯೋದಲ್ಲಿ ಜೂಜು ಆಡಲು ಅವಕಾಶ ನೀಡುತ್ತದೆ. ಆದರೆ ಅದನ್ನು ಸಿನಿಮಾದಲ್ಲಿ ತೋರಿಸಿದರೆ, ಜಾಹೀರಾತಿನಲ್ಲಿ ನಟಿಸಿದರೆ ತಪ್ಪೇ ಎನ್ನುವಂತೆ ಪ್ರಶ್ನಿಸಿದ್ದಾರೆ.

ತೆಲುಗು ನಟ ಅಲ್ಲು ಅರ್ಜುನ್(Allu Arjun) ತಾನು ಪಾನ್ ಮಸಾಲ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದ ನಟರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ್ದರು.

ನಟ ಅಕ್ಷಯ್ ಕುಮಾರ್  ಎಲ್ಲ ನಟರಂತಲ್ಲ, ಯಾಕೆಂದ್ರೆ ಪದ್ಮಶ್ರೀ(Padma Shri) ಪುರಸ್ಕೃತ ನಟರಾಗಿ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಪದ್ಮಶ್ರೀ ಪುರಸ್ಕೃತ ನಟನೊಬ್ಬ, ಪಾನ್ ಮಸಾಲ ಜಗಿಯಿರಿ ಎಂಬ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ, ಪದ್ಮಶ್ರೀ ಪ್ರಶಸ್ತಿಗಿರುವ ಘನತೆಗೆ ಅವಮಾನಿಸಿದಂತಲ್ಲವೇ ಎನ್ನುವುದು ನೆಟ್ಟಿಗರವಾದವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಧಮ್ ಇದ್ರೆ, ಎಸ್‌ ಡಿಪಿಐ, ಆರ್‌ಎಸ್‌ಎಸ್, ಬಜರಂಗಳವನ್ನು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್

ಸ್ವಲ್ಪವಾದರೂ ಗಂಡಸ್ತನ ತೋರಿಸಿ: ಪ್ರಮೋದ್ ಮುತಾಲಿಕ್ ಆಕ್ರೋಶ

ಕರ್ನಾಟಕದಲ್ಲೂ ಪೊರಕೆ ಬೀಸುತ್ತಾರಾ ಕೇಜ್ರಿವಾಲ್: 0% ಸರ್ಕಾರದ ಭರವಸೆ!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ  ವಾರೆಂಟ್

ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಬೈಕ್ ನಲ್ಲಿ ಜಾಲಿ ರೈಡ್: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ