ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಜನರ ಮಾರಣಹೋಮ | ಪರಿಸ್ಥಿತಿ ಸರ್ಕಾರದ ಕೈ ಮೀರಿದೆಯೇ?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಸರ್ಕಾರದ ಕೈ ಮೀರಿ ಹೋಗಿದೆ ಎಂದು ಹೇಳಲಾಗಿದ್ದು, ಆಕ್ಸಿಜನ್ ಸರಬರಾಜಿನಲ್ಲಿ ಕೂಡ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿದೆ. ಕಲಬುರ್ಗಿಯಲ್ಲಿ ನಾಲ್ವರು ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ ಬಳಿಕ ಇದೀಗ ಆಸ್ಪತ್ರೆಗೆ ಆಕ್ಸಿಜನ್ ಬಂದಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ದೆಹಲಿಯ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಕಾಣುತ್ತಿದೆ. ಮುಖ್ಯವಾಗಿ ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸೇರಿದಂತೆ ವಿವಿಧ ಮೂಲಣಭೂತ ಸೌಕರ್ಯಗಳ ಮಾಹಿತಿ ಕೂಡ ಸರ್ಕಾರಕ್ಕೆ ಇಲ್ಲ ಎನ್ನುವುದಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆಯೇ ನಿದರ್ಶನವಾಗಿದೆ. ಇದೀಗ ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ಹೊಣೆಯಾಗಿಸಿ, ಜನಪ್ರತಿನಿಧಿಗಳು ಬಚಾವ್ ಆಗುವ ಸ್ಥಿತಿ ಕಂಡು ಬಂದಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.
15 ದಿನಗಳ ಕಾಲ ಲಾಕ್ ಡೌನ್ ಮಾದರಿಯ ಕ್ರಮವನ್ನು ಕೈಗೊಂಡರೆ, ಸರ್ಕಾರ ಎಲ್ಲದಕ್ಕೂ ಸಜ್ಜಾಗುತ್ತದೆ ಎಂದು ಸಚಿವ ಸಂಪುಟ ಸಭೆಯಲ್ಲಿ ಸಚಿವ ಸುಧಾಕರ್ ಹೇಳಿದ್ದರು, ಆದರೆ, ಲಾಕ್ ಡೌನ್ ಆಗಿ ಇಷ್ಟು ದಿನಗಳಾದರೂ, ಆಸ್ಪತ್ರೆಗಳು ಇನ್ನೂ ಕೊರೊನಾ ಎದುರಿಸಲು ಸಿದ್ಧವೇ ಆಗಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಆಕ್ಸಿಜನ್ ವಿಚಾರವಾಗಿದ ದೇಶಾದ್ಯಂತ ಗಂಭೀರವಾದ ಚರ್ಚೆಗಳಾಗುತ್ತಿದ್ದರು, ಪ್ರತಿ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಕೊರೊನಾ ಮೊದಲ ಅಲೆಯಲ್ಲಿಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆ ಬಂದರೂ ಸರ್ಕಾರ ಇನ್ನೂ ಕೊರೊನಾ ಎದುರಿಸಲು ಕೇವಲ ಲಾಕ್ ಡೌನ್ ಒಂದೇ ಮಾರ್ಗ ಎನ್ನುವಂತೆ ವರ್ತಿಸುತ್ತಿದೆ. ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ರಾಜ್ಯದ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಊಹಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಬರುತ್ತದೆ. ದೆಹಲಿ, ಮಹಾರಾಷ್ಟ್ರದಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಬರಲು ಹೆಚ್ಚು ಕಾಲ ಬೇಡ. ಅದಕ್ಕೆ ನಿದರ್ಶನವಾಗಿ ಚಾಮರಾಜನಗರದಲ್ಲಿ ನಡೆದಿರುವ ಮಾರಣಹೋಮವೇ ಸಾಕ್ಷಿ ಎನ್ನುವ ಮಾತುಗಳು ಕೇಳಿ ಬಂದಿದೆ.