ಸರ್ಕಾರಿ ಕಚೇರಿಯಲ್ಲಿ ಮಹಿಳೆ ಜೊತೆ ಮಾಡಬಾರದ ಕೆಲಸ ಮಾಡಿದ ರೆವಿನ್ಯೂ ಇನ್ಸ್​ಪೆಕ್ಟರ್ ಬಂಧನ - Mahanayaka
5:16 AM Wednesday 11 - December 2024

ಸರ್ಕಾರಿ ಕಚೇರಿಯಲ್ಲಿ ಮಹಿಳೆ ಜೊತೆ ಮಾಡಬಾರದ ಕೆಲಸ ಮಾಡಿದ ರೆವಿನ್ಯೂ ಇನ್ಸ್​ಪೆಕ್ಟರ್ ಬಂಧನ

arrested
19/04/2021

ಧೆಂಕನಲ್: ಸರ್ಕಾರಿ ಕಚೇರಿಯಲ್ಲಿ ಮಾಡಬಾರದ ಕೆಲಸ ಮಾಡಿದ ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್​ ಜಿಲ್ಲೆಯ ರೆವಿನ್ಯೂ ಇನ್ಸ್​ಪೆಕ್ಟರ್ ನನ್ನು ಬಂಧಿಸಲಾಗಿದ್ದು, ಇದರ ಬೆನ್ನಲ್ಲೇ ಆತನನ್ನು ಅಮಾನತು ಮಾಡಲಾಗಿದೆ.

ರಂಜನ್​ ಪಾಣಿಗ್ರಹಿ ಬಂಧಿತ ಆರೋಪಿಯಾಗಿದ್ದು, ಸರ್ಕಾರಿ ಕಚೇರಿಯಲ್ಲಿ ಮಹಿಳೆಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಣಿಗ್ರಹಿಯನ್ನು ಬಂಧಿಸಿ, ಅಮಾನತಿನಲ್ಲಿಡಲಾಗಿದೆ.

ರಂಜನ್​ ಪಾಣಿಗ್ರಹಿ ಮಹಿಳೆಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ನಿರತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಎರಡನೇ ದಿನ ವಿಡಿಯೋದಲ್ಲಿದ್ದ ಮಹಿಳೆ ದೂರು ನೀಡಿದ್ದಾಳೆ. ಏಪ್ರಿಲ್​ 11ರಂದು ಧೆಂಕನಕಲ್​ ಜಿಲ್ಲಾಧಿಕಾರಿ ಭೂಮೇಶ್​ ಚಂದ್ರ ಬೆಹೆರಾ ಅವರು ಆರೋಪಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದ್ದರು.

ಪಾಣಗ್ರಹಿ ಕಚೇರಿಯಲ್ಲಿ ಮದ್ಯದ ಬಾಟಲಿಗಳಿದ್ದು, ಹೊರಗಿ ವ್ಯಕ್ತಿಗಳು ಕೂಡ ಈತನ ಕಚೇರಿಯಲ್ಲಿ ಬಂದು ಮಾಡಬಾರದ ಕೆಲಸಗಳನ್ನು ಮಾಡಿ ತೆರಳುತ್ತಿದ್ದರು ಎನ್ನುವ ಆರೋಪ ಕೂಡ ಇದೆ.  ಸದ್ಯ ಆರೋಪಿಯನ್ನು 6 ತಿಂಗಳ ಕಾಲ ಅಮಾನತಿನಲ್ಲಿಡಲಾಗಿದೆ.

ಇತ್ತೀಚಿನ ಸುದ್ದಿ