ಸರ್ಕಾರಿ ಉದ್ಯೋಗಗಳಲ್ಲಿ ಎಸ್ಸಿ—ಎಸ್ಟಿ ನೌಕರರಿಗೆ ಬಡ್ತಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ನೌಕರರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಸಂಜೀವ ಖನ್ನಾ ಹಾಗೂ ಬಿ.ಆರ್.ಗವಾಯಿ ಇವರಿರುವ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ.
ಗ್ರೂಪ್ ‘ಎ’ ನಂತಹ ಉನ್ನತ ಹುದ್ದೆಗೇರುವುದು ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ಬಹಳ ಕಷ್ಟ. ಇಂತಹ ಉನ್ನತ ಹುದ್ದೆಗಳಿಗೆ ಎಸ್ಟಿ, ಎಸ್ಟಿ ಹಾಗೂ ಒಬಿಸಿ ನೌಕರರನ್ನು ಭರ್ತಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವಂತಹ ವಾಸ್ತವದಿಂದ ಕೂಡಿದ ಆಧಾರವನ್ನು ಸುಪ್ರೀಂಕೋರ್ಟ್ ಒದಗಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ಇನ್ನೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್ ಹಾಗೂ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲರು ಸಹ ವಾದ ಮಂಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲ್ಲ: ಸುಪ್ರೀಂ ಕೋರ್ಟ್ ಗೆ ಉತ್ತರಿಸಿದ ಬೊಮ್ಮಾಯಿ ಸರ್ಕಾರ
ಕುಮಾರಸ್ವಾಮಿಯ ದಾಖಲೆ ನನ್ನ ಬಳಿ ಇದೆ, ಗೌರವ ಇಲ್ಲದೇ ಮಾತನಾಡಿದ್ರೆ ಸುಮ್ನಿರಲ್ಲ | ಜಮೀರ್ ಎಚ್ಚರಿಕೆ
ಬಿಜೆಪಿಯ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು | ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ
ಬ್ರಾಹ್ಮಣರಿಗೆ ಉನ್ನತ ಹುದ್ದೆ, ದಲಿತ, ಬಿಲ್ಲವ, ಬಂಟರಿಗೆ ತ್ರಿಶೂಲ ವಿತರಣೆ | ಭಾಸ್ಕರ್ ಪ್ರಸಾದ್ ಕಿಡಿ
74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು
ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ
ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? | ಕೇಂದ್ರ ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ