ಸಾರನಾಥಕ್ಕೆ ಭೇಟಿ ನೀಡಿ ಬುದ್ಧ, ಅಶೋಕನ ವೈಭವ ಕಣ್ತುಂಬಿಕೊಂಡ ಶಾಸಕ ಪ್ರಿಯಾಂಕ್ ಖರ್ಗೆ

ಬೌದ್ಧ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಸಾರನಾಥಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿದ್ದು, ತಮ್ಮ ಭೇಟಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬೌದ್ಧ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಸಾರನಾಥಕ್ಕೆ ಭೇಟಿ ನೀಡಿ ಇಲ್ಲಿನ ಇತಿಹಾಸವನ್ನು ಅರಿಯುವ ಪ್ರಯತ್ನ ಕೈಗೊಂಡೆ. ಭಗವಾನ್ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ್ದು ಇಲ್ಲಿಯೇ. ಸಾರಾನಾಥ ಸುಮಾರು 2000 ವರ್ಷಗಳ ಕಾಲ ಕಲಿಕೆಯ ಕೇಂದ್ರವಾಗಿತ್ತು. ಪಾಲಿ ಪಠ್ಯಗಳಲ್ಲಿ ಸಾರನಾಥವನ್ನು ‘ಇಸಿಪತನ’ ಎಂದು ಕರೆಯಲಾಗುತ್ತಿತ್ತು, ಅದು ‘ಪವಿತ್ರ ಜನ ಬಂದಿಳಿದ ಸ್ಥಳ’ ಎಂಬ ಅರ್ಥ ನೀಡುತ್ತದೆ ಎಂದರು.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಸಾರಾನಾಥದಲ್ಲಿ ನಮಗೆ ಕಾಣುವ ಹೆಚ್ಚಿನ ಅವಶೇಷಗಳು ಅಶೋಕ ಚಕ್ರವರ್ತಿಯ ಕಾಲದ್ದು. ಕಳಿಂಗ ಯುದ್ಧದ ನಂತರ ಬೌದ್ಧಧರ್ಮವನ್ನು ಸ್ವೀಕರಿಸಿ, ಅವರು ಮೌರ್ಯ ಸಾಮ್ರಾಜ್ಯದಾದ್ಯಂತ ಸ್ತೂಪಗಳು ಮತ್ತು ಸ್ತಂಭ ಶಾಸನಗಳನ್ನು ನಿರ್ಮಿಸಲು ಪ್ರಾರಂಭಿಸಿದರು, ಅದರಲ್ಲಿ ಕೆಲವೇ ಕೆಲವು ಉಳಿದುಕೊಂಡಿವೆ ಎಂದು ತಿಳಿಸಿದರು.
ಈಗ ಉಳಿದಿರುವ ಏಕೈಕ ಸ್ತೂಪವೆಂದರೆ ಧಮೇಖ್ ಸ್ತೂಪ. ಮೇಲ್ನೋಟಕ್ಕೆ ಇದಕ್ಕಿಂತ ದೊಡ್ಡದಾದ ಇನ್ನೊಂದು ಸ್ತೂಪವಿತ್ತು, ಧರ್ಮರಾಜಿಕ ಸ್ತೂಪವನ್ನು ಬನಾರಸ್ ರಾಜನ ದಿವಾನರು ಮಾರುಕಟ್ಟೆಯನ್ನು ನಿರ್ಮಿಸಲು ಕಟ್ಟಡ ಸಾಮಗ್ರಿಗಳು ಬೇಕಾಗಿದ್ದರಿಂದ ಅದನ್ನು ಕೆಡವಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಸಾರಾನಾಥ ಅಶೋಕ ಸ್ತಂಭಗಳಲ್ಲಿ ಅತ್ಯಂತ ಪ್ರಸಿದ್ಧವಾದ ನಾಲ್ಕು ಸಿಂಹಗಳನ್ನು ನಮ್ಮ ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿಕೊಂಡಿದೆ. ಭವ್ಯವಾದ ಲಾಂಛನವನ್ನು ಸಾರನಾಥ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ, ಇದನ್ನು ಎಲ್ಲರೂ ನೋಡಲೇ ಬೇಕಾದ ಜಾಗವಾಗಿದೆ ಎಂದು ಅವರು ಕರೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka