ಸಾರ್ವಜನಿಕರನ್ನು ಟ್ರೋಲ್ ಮಾಡಿದ ಟ್ರಾಫಿಕ್ ಪೊಲೀಸರು | ಟ್ರೋಲ್ ನೋಡಿ ಬಿದ್ದುಬಿದ್ದು ನಕ್ಕ ಜನರು
ತಿರುವನಂತಪುರಂ: ಸಾಮಾನ್ಯವಾಗಿ ಸಾರ್ವಜನಿಕರು ಟ್ರಾಫಿಕ್ ಪೊಲೀಸರನ್ನು ಟ್ರೋಲ್ ಮಾಡುತ್ತಾರೆ. ಆದರೆ ಇಲ್ಲಿ ಪೊಲೀಸರೇ ಸಾರ್ವಜನಿಕರನ್ನು ಟ್ರೋಲ್ ಮಾಡಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಕೇರಳ ಟ್ರಾಫಿಕ್ ಪೊಲೀಸರು ಟ್ರೋಲ್ ಮಾಡಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಏಪ್ರಿಲ್ 15ರಂದು ನಡೆದ ಘಟನೆಯೊಂದನ್ನು ಸೇವ್ ಮಾಡಿಕೊಂಡಿರುವ ಪೊಲೀಸರು ಮಲೆಯಾಲಂ ಚಿತ್ರಗಳ ಕಾಮಿಡಿ ಡೈಲಾಗ್ ಬಳಸಿ ಟ್ರೋಲ್ ಮಾಡಿದ್ದಾರೆ. ಅಷ್ಟಕ್ಕೂ ಈ ಏಪ್ರಿಲ್ 15ರಂದು ನಡೆದಿದ್ದ ಘಟನೆ ಏನೆಂದರೆ, ಮೂವರು ಹೊಂಡಾ ಆಕ್ವೀವಾದಲ್ಲಿ ತ್ರಿಬಲ್ ರೈಡ್ ಮಾಡುತ್ತಾ ಬರುತ್ತಿದ್ದರು. ಒಬ್ಬರು ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಇದೇ ಸಂದರ್ಭದಲ್ಲಿ ಅವರ ಎದುರಿನಿಂದ ಪೊಲೀಸ್ ವಾಹನ ಬಂದಿದೆ. ಈ ವೇಳೆ ತಕ್ಷಣವೇ ಆಕ್ಟೀವ ನಿಲ್ಲಿಸಿ ಒಬ್ಬ ವ್ಯಕ್ತಿ ಓಡಿ ಹೋಗಿದ್ದು, ಇನ್ನೊಬ್ಬ ನಿಧಾನವಾಗಿ ತನಗೆ ಏನೂ ಗೊತ್ತಿಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿರುತ್ತಾನೆ. ಇನ್ನೊಬ್ಬ ಆಕ್ಟೀವಾದಲ್ಲಿ ಪರಾರಿಯಾಗುತ್ತಾನೆ.
35 ಸೆಕೆಂಡುಗಳ ಈ ಕ್ಲಿಪ್ ನಲ್ಲಿ ಸಾರ್ವಜನಿಕರ ಪ್ರತಿಭೆಯನ್ನು ಪೊಲೀಸರು ಟ್ರೋಲ್ ಮಾಡಿದ್ದು, 44 ಸಾವಿರಕ್ಕೂ ಅಧಿಕ ಜನರ ಮೆಚ್ಚುಗೆಯನ್ನು ಈ ವಿಡಿಯೋ ಪಡೆದುಕೊಂಡಿದೆ. ಇವರ ನಟನೆಗೆ ಪ್ರಶಸ್ತಿ ನೀಡಬೇಕು ಎಂದು ಕೇರಳಿಗರು ಕಮೆಂಟ್ ಮಾಡಿದ್ದಾರೆ.