“ಸತ್ಯ ನುಡಿದಿದ್ದಕ್ಕೆ ಹಂಸಲೇಖ ಕ್ಷಮೆಯಾಚಿಸಿದರು” | ಹಂಸಲೇಖ ಅವರಿಗೆ ವ್ಯಕ್ತವಾಗುತ್ತಿದೆ ಭಾರೀ ಬೆಂಬಲ

hamsalekha
17/11/2021

ಬೆಂಗಳೂರು: ಹಂಸಲೇಖ ಅವರು ಸತ್ಯ ನುಡಿದಿದ್ದಕ್ಕೆ ಕ್ಷಮೆ ಕೇಳಿದರು ಎಂದು ರಾಜ್ಯಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಸಸ್ಯಹಾರಿಗಳು ಮಾಂಸಹಾರಿಗಳನ್ನು ಅತ್ಯಂತ ನಿಕೃಷ್ಟವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಹಂಸಲೇಖ ಅವರು ದೇಶದ ಬಗ್ಗೆ ಚಿಂತೆ ಮಾಡಿದ್ದಕ್ಕೆ ಅವರಿಗೆ ಸಿಕ್ಕಿದ್ದೇನು ಎನ್ನುವುದನ್ನು ಖ್ಯಾತ ಕವಿ ಕವಿರಾಜ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. “ಈ ದೇಶದ್ ಕಥೆ ಇಷ್ಟೇ ಕಣಮ್ಮೋ… ಇಲ್ಲ್ ಚಿಂತೇ(ಚಿಂತನೆ) ಮಾಡಿ ಲಾಭ ಇಲ್ಲಮ್ಮೋ” ಎಂದು ಬರೆದುಕೊಂಡಿದ್ದಾರೆ.

ಕವಿರಾಜ್ ಮಾತ್ರವಲ್ಲದೇ ಮಾಂಸಹಾರ ಪ್ರಿಯರು ಕೂಡ ಹಂಸಲೇಖ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. “ಹಂಸಲೇಖ ಸತ್ಯ ಹೇಳಿದ್ದಕ್ಕೆ ಅವರಿಂದ ಕ್ಷಮೆ ಕೇಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಜಾವರ ಶ್ರೀಗೆ ಅವಮಾನವಾಗುವಂತಹದ್ದು ಅವರೇನೂ ಮಾತನಾಡಿಲ್ಲ. ಆದರೂ, ದೊಡ್ಡ ಜಾತಿಯವರು ಎಂದಿಗೂ ತಮ್ಮಿಂದ ಕೆಳಗಿರುವವರನ್ನು ಸಮಾನವಾಗಿ ನೋಡಲು ಸಾಧ್ಯವಿಲ್ಲ ಎಂಬ ಅವರ ಮಾತಿನ ಸಾರಂಶವನ್ನು ತಿರುಚಿ, ವಿವಾದ ಸೃಷ್ಟಿಸಿ, ಹಂಸಲೇಖ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಬಿಟ್ ಕಾಯಿನ್ ಪ್ರಕರಣ ಮರೆಮಾಚಲು ಪ್ರಯತ್ನ?

ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ ಭಾರೀ ಚರ್ಚೆಯಲ್ಲಿದೆ. ಇದೇ ಸಂದರ್ಭದಲ್ಲಿ ಹಂಸಲೇಖ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತುಗಳನ್ನು ಒಂದು ದಿನದ ಬಳಿಕ ವಿವಾದ ಎಬ್ಬಿಸಲಾಗಿದೆ ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿದೆ. ಬಿಟ್ ಕಾಯಿನ್ ಪ್ರಕರಣವನ್ನು ಮರೆಮಾಚುವ ಉದ್ದೇಶದಿಂದ ಯಾವುದೇ ವಿವಾದವೇ ಇಲ್ಲದಿದ್ದರೂ ಹಂಸಲೇಖ ಅವರ ಮಾತುಗಳನ್ನು ತಂದಿಟ್ಟು, ವಿವಾದ ಎಬ್ಬಿಸಿ ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ ಎನ್ನುವ ಚರ್ಚೆಗಳು ಕೂಡ ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಪರೀಕ್ಷೆ ಬರೆದು ಪಾಸ್ ಆದ 104 ವರ್ಷದ ಕುಟ್ಟಿಯಮ್ಮಗೆ ಅಭಿನಂದನೆಗಳ ಮಹಾಪೂರ

ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್

ಬಿಟ್ ಕಾಯಿನ್  ಪ್ರಮುಖ ಆರೋಪಿ  ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ?

ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!

ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ

ಮನೆಗೆ ಬಡಿದ ಸಿಡಿಲು: ವ್ಯಕ್ತಿ ದಾರುಣ ಸಾವು | ಸಮೀಪದ ಮನೆಗಳಿಗೂ ತೀವ್ರ ಹಾನಿ

ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್

ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

ಇತ್ತೀಚಿನ ಸುದ್ದಿ

Exit mobile version