ಅಂತ್ಯಸಂಸ್ಕಾರಕ್ಕೆ ಆಂಬುಲೆನ್ಸ್ ನಿಂದ ಇಳಿಸುವಾಗ ಕಣ್ಣು ತೆರೆದ ಕೊವಿಡ್ ರೋಗಿ! - Mahanayaka
12:54 PM Friday 20 - September 2024

ಅಂತ್ಯಸಂಸ್ಕಾರಕ್ಕೆ ಆಂಬುಲೆನ್ಸ್ ನಿಂದ ಇಳಿಸುವಾಗ ಕಣ್ಣು ತೆರೆದ ಕೊವಿಡ್ ರೋಗಿ!

thane
24/04/2021

ಥಾಣೆ: ಅಂತ್ಯಸಂಸ್ಕಾರಕ್ಕೆಂದು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ವ್ಯಕ್ತಿ, ಸಿಬ್ಬಂದಿಗಳು ದೇಹವನ್ನು ಕೆಳಗಿಳಿಸಲು ನೋಡಿದಾಗ ಆತ ಇನ್ನೂ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೂ ಈ ವಿಡಿಯೋ ವೈರಲ್ ಆದ ಬಳಿಕ ದೂರೊಂದು ದಾಖಲಾಗಿದ್ದು, ವಿಡಿಯೋದಲ್ಲಿದ್ದ ವ್ಯಕ್ತಿಯ ಪುತ್ರಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಥಾಣೆಯ ಉಲ್ಲಾಸ್ ನಗರದ ನಿವಾಸಿ ನಿರ್ಮಲಾ ಗುಪ್ತಾ ಎಂಬವರು ದೂರು ನೀಡಿದವರಾಗಿದ್ದು, ವಿಡಿಯೋದಲ್ಲಿರುವವರು ತನ್ನ ತಂದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಜೂನ್ 24ರಂದು ನ್ಯೂಮೋನಿಯಾ ಲಕ್ಷಣ ಹಿನ್ನೆಲೆಯಲ್ಲಿ ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಜೂನ್ 27ರಂದು ಅವರಿಗೆ ಕೊರೊನಾ ದೃಢವಾಗಿತ್ತು. ಇದಾದ ಬಳಿಕ ಅವರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜೂನ್ 29ರಂದು ವ್ಯಕ್ತಿ ಕೊವಿಡ್ ನಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆ ತಿಳಿಸಿತ್ತು.


Provided by

ಅಂತ್ಯ ಸಂಸ್ಕಾರ ಆಸ್ಪತ್ರೆಯ ವತಿಯಿಂದಲೇ ನಡೆಸಲಾಗಿತ್ತು. ಅಂತ್ಯಕ್ರಿಯೆ ವೇಳೆಯಲ್ಲಿಯೂ ಮೃತದೇಹದ ಗಾತ್ರಕಂಡು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಮೃತದೇಹದ ಮುಖ ತೋರಿಸಲು ಸಿಬ್ಬಂದಿ ನಿರಾಕರಿಸಿದ್ದರು.

3 ದಿನಗಳ ಹಿಂದೆ ಆಸ್ಪತ್ರೆ ಸತ್ತಿದ್ದಾನೆ ಎಂದು ಘೋಷಿಸಲಾಗಿದ್ದ ವ್ಯಕ್ತಿ ಪಿಪಿಇ ಕಿಟ್ ಒಳಗೆ ಉಸಿರಾಡುತ್ತಿರುವ ವಿಡಿಯೋ ಕುಟುಂಬಸ್ಥರಿಗೆ ದೊರಕಿದೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಇದು ನಡೆದಿದೆ ಎಂದು ತಿಳಿದು ಬಂದಿದೆ ಇದೀಗ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದೀಗ ವಿಡಿಯೋದಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಈಗ ಎಲ್ಲಿದ್ದಾರೆ. ಈ ವಿಡಿಯೋ ಮಾಡಿದವರು ಯಾರು? ಎನ್ನುವುದು ರಹಸ್ಯವಾಗಿ ಉಳಿದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ