ಮಹಿಳೆ ಮೃತಪಟ್ಟು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ!
ಮೀರತ್: ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಗೆ ಸೆ.8ರಂದು ಕೊವಿಡ್ ಲಸಿಕೆ ಹಾಕಿಸಿದ ಘಟನೆಯೊಂದು ಮೀರತ್ ಜಿಲ್ಲೆಯ ಸರ್ಧನ ಎಂಬಲ್ಲಿ ನಡೆದಿದ್ದು, ಈ ಸಂದೇಶ ಕುಟುಂಬಸ್ಥರಿಗೆ ಬಂದ ತಕ್ಷಣ ಕುಟುಂಬಸ್ಥರು ಗೊಂದಲಕ್ಕೀಡಾಗಿದ್ದಾರೆ.
ನಾಲ್ಕು ತಿಂಗಳ ಹಿಂದೆ ಫರಾ ಎಂಬವರು ಮೃತಪಟ್ಟಿದ್ದರು. ಆದರೆ, ಸೆಪ್ಟಂಬರ್ 8ರಂದು ಮೃತರ ಸಹೋದರ ವಾಸಿಂ ಎಂಬವರ ಮೊಬೈಲ್ ಗೆ ಫರಾ ಅವರಿಗೆ ಕೊವಿಡ್ ಲಸಿಕೆ ಯಶಸ್ವಿಯಾಗಿ ನೀಡಲಾಗಿದೆ ಎಂದು ಸಂದೇಶ ಬಂದಿದೆ. ಇದರಿಂದಾಗಿ ಆರೋಗ್ಯ ಕೇಂದ್ರದ ಯಡವಟ್ಟು ಬೆಳಕಿಗೆ ಬಂದಿದೆ.
ಫರಾ ಅವರು ಮೃತಪಟ್ಟಿರು ಬಗ್ಗೆ ಪುರಸಭೆಯೇ ಮರಣ ಪತ್ರವನ್ನ ನೀಡಿದೆ. ಆದರೆ, ಲಸಿಕಾ ಕೇಂದ್ರದಲ್ಲಿ ಫರಾಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸೆಪ್ಟೆಂಬರ್ 8ರಂದು ಕೊರೊನಾ ಲಸಿಕೆ ನೀಡಿದ ಬಗ್ಗೆ ದಾಖಲೆ ನೀಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ಇನ್ನೂ ಈ ವಿಚಾರವಾಗಿ ಮೃತರ ಕುಟುಂಬಸ್ಥರು ಆರೋಗ್ಯ ಕೇಂದ್ರದಲ್ಲಿ ವಿಚಾರಣೆ ನಡೆಸಿದ್ದು, ಈ ವೇಳೆ ಸಿಬ್ಬಂದಿ ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಯಡವಟ್ಟಿನ ಬಗ್ಗೆ ಆರೋಗ್ಯ ಕೇಂದ್ರವು ಈವರೆಗೆ ಯಾವುದೇ ಸೃಷ್ಟೀಕರಣವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ
ಇನ್ನಷ್ಟು ಸುದ್ದಿಗಳು…
ದೇವಸ್ಥಾನ ತೆರವು ವಿಚಾರ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಪರ್ಯಾಯ ರಾಜಕೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ | ಡಾ.ಎಂ.ವೆಂಕಟಸ್ವಾಮಿ
ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ | ನಾಲ್ವರು ಆರೋಪಿಗಳು ಅರೆಸ್ಟ್
ಬಿಜೆಪಿ ಮತ್ತು ಆರೆಸ್ಸೆಸ್ ನವರು ನಕಲಿ ಹಿಂದೂಗಳು | ರಾಹುಲ್ ಗಾಂಧಿ ವಾಗ್ದಾಳಿ
ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು!
ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!