ಆರ್ಥಿಕವಾಗಿ ದುರ್ಬಲರಾಗಿರುವ ಪ್ರಜೆಗಳಿಗೆ ಸಾವಿರ ರಿಯಾಲನ್ನು ನೀಡಿದ ಸೌದಿ ಅರೇಬಿಯಾ

19/03/2025
ಆರ್ಥಿಕವಾಗಿ ದುರ್ಬಲರಾಗಿರುವ ಸೌದಿ ಪ್ರಜೆಗಳಿಗೆ ಈದ್ ನ ಉಡುಗೊರೆಯಾಗಿ ಸೌದಿ ಆಡಳಿತವು ಸಾವಿರ ರಿಯಾಲನ್ನು ವಿತರಿಸಿದೆ. ಅಲ್ಲದೆ ಕುಟುಂಬಗಳಿಗೆ ಹೆಚ್ಚುವರಿಯಾಗಿ 500 ರಿಯಾಲ್ ಕೂಡ ನೀಡಲಾಗಿದೆ.
ಈಗಾಗಲೇ ಸೌದಿಯಲ್ಲಿ ಇಂತಹ ದುರ್ಬಲ ನಾಗರಿಕರಿಗೆ ಝಕಾತ್ ಫಂಡನ್ನು ಉಪಯೋಗಿಸಿ ಸಬಲೀಕರಣಕ್ಕೆ ಬೇಕಾದ ಯೋಜನೆ ಚಾಲ್ತಿಯಲ್ಲಿದೆ. ಇದರ ಜೊತೆಗೆ ಚಿಕಿತ್ಸೆಗೆ ನೆರವು, ಉಚಿತ ಆಹಾರ, ಉಚಿತ ಶಿಕ್ಷಣ ಮುಂತಾದವು ಕೂಡ ಜಾರಿಯಲ್ಲಿ ಇದೆ. ಇದರ ಹೊರತಾಗಿ ಇದೀಗ ಈದ್ ಕೊಡುಗೆಯನ್ನು ಸೌದಿ ಆಡಳಿತ ತನ್ನ ನಾಗರಿಕರಿಗೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj