ಸೌದಿ ಅರೇಬಿಯಾದಲ್ಲಿ ಒಂಟೆಯ ಉತ್ಪನ್ನಕ್ಕೆ ಭಾರೀ ಬೇಡಿಕೆ: ಚೈನಾ ಸಹಿತ ಜಗತ್ತಿನ ಹಲವು ರಾಷ್ಟ್ರಗಳಿಂದ ಡಿಮ್ಯಾಂಡ್
ಸೌದಿ ಅರೇಬಿಯಾ ಉತ್ಪಾದಿಸುವ ಒಂಟೆಯ ಹಾಲು ಮತ್ತು ಒಂಟೆಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿವೆ. ಒಂಟೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕಾಗಿಯೇ ಆರು ಫಾರ್ಮ್ ಗಳು ಸೌದಿ ಅರೇಬಿಯಾದಲ್ಲಿ ಸದ್ಯ ಅಸ್ತಿತ್ವದಲ್ಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿಯ ಒಂಟೆಯ ಹಾಲು ಲೀಟರ್ ಗೆ 18 ರಿಂದ 20 ಡಾಲರ್ ವರೆಗೆ ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ. ಒಂಟೆಯ ಮೊಸರಿಗೂ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇದೆ. ಚೈನಾ ಸಹಿತ ಜಗತ್ತಿನ ಹಲವು ರಾಷ್ಟ್ರಗಳ ಜನರು ಒಂಟೆಯ ಹಾಲಿಗೆ ಮುಗಿ ಬೀಳುತ್ತಾರೆ. ಕಳೆದ ಎರಡು ವರ್ಷಗಳಿಂದ ಚೀನಾ ಸಹಿತ ವಿವಿಧ ರಾಷ್ಟ್ರಗಳಿಗೆ ಒಂಟೆಯ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತೆ. 2024ನ್ನು ಸೌದಿ ಅರೇಬಿಯಾ ಒಂಟೆಯ ವರ್ಷ ಎಂದು ಘೋಷಿಸಿ ಸೌದಿ ಆದ್ಯಂತ ಬೇರೆ ಬೇರೆ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು. ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಸ್ಪರ್ಧೆಯು ಜಾಗತಿಕವಾಗಿಯೇ ಜನಪ್ರಿಯವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj