ಬಿಗಿ ಕ್ರಮ: ಆಭರಣಗಳ ಮೇಲೆ ಕುರಾನ್ ಪದಗಳನ್ನು ಬರೆಯುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ ಸರ್ಕಾರ
ರಿಯಾದ್: ಆಭರಣ ಮತ್ತು ಕರಕುಶಲ ವಸ್ತುಗಳ ಮೇಲೆ ಕುರಾನ್ ಪದಗಳನ್ನು ಬರೆಯುವುದನ್ನು ಸೌದಿ ವಾಣಿಜ್ಯ ಸಚಿವಾಲಯ ನಿಷೇಧಿಸಿದೆ. ಇದು ಕುರಾನ್ ನಲ್ಲಿನ ವಚನಗಳನ್ನು ಪ್ರಸ್ತುತ ಉದ್ದೇಶಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಅಗೌರವ ಮತ್ತು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ.
ಚಿನ್ನದ ವಸ್ತುಗಳ ಮೇಲಿನ ಇಂತಹ ಶಾಸನಗಳು ಕುರಾನ್ ವಚನಗಳ ಪಾವಿತ್ರ್ಯವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಇದನ್ನು ಧರಿಸುವವರು ಶೌಚಾಲಯಗಳಿಗೆ ಪ್ರವೇಶಿಸಿದಾಗ ಅಪವಿತ್ರಗೊಳಿಸುವುದನ್ನು ಒಳಗೊಂಡಿರುತ್ತದೆ ಎಂದು ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಯುಎಇ ವೀಸಾ ನಿಯಮಗಳಲ್ಲಿ ಬದಲಾವಣೆಯನ್ನು ಪರಿಚಯಿಸಿದೆ. ಅದು ಕೆಲಸ ಹುಡುಕಲು ಯುಎಇಗೆ ಬರುವ ವಲಸಿಗರನ್ನು ಹಿಮ್ಮೆಟ್ಟಿಸುತ್ತದೆ. ಯುಎಇ ದೀರ್ಘಕಾಲದಿಂದ ನೀಡುತ್ತಿದ್ದ ಮೂರು ತಿಂಗಳ (90 ದಿನಗಳ) ವೀಸಾವನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಯುಎಇಗೆ ಬರುವವರಿಗೆ 30 ಮತ್ತು 60 ದಿನಗಳ ಭೇಟಿ ವೀಸಾಗಳು ಮಾತ್ರ ಲಭ್ಯವಿರುತ್ತವೆ ಎಂದು ಯುಎಇ ಸರ್ಕಾರ ಘೋಷಿಸಿದೆ.
ದುಬೈನ ಸೂಪರ್ ಜೆಟ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮೊಹಮ್ಮದ್ ಮಸಿಯುದ್ದೀನ್, ಯುಎಇಗೆ 30 ದಿನಗಳು ಅಥವಾ 60 ದಿನಗಳ ಭೇಟಿ ವೀಸಾಗಳು ಮಾತ್ರ ಲಭ್ಯವಿದೆ ಎಂದು ಹೇಳಿದ್ದಾರೆ.