ಬಾಹ್ಯಾಕಾಶ ಯಾತ್ರೆ ನಡೆಸಿದ ಸೌದಿಯ ಮೊದಲ ಮಹಿಳೆ: ಹೊಸ ಗಿನ್ನೆಸ್ ರೆಕಾರ್ಡ್ ದಾಖಲು - Mahanayaka
4:46 PM Wednesday 11 - December 2024

ಬಾಹ್ಯಾಕಾಶ ಯಾತ್ರೆ ನಡೆಸಿದ ಸೌದಿಯ ಮೊದಲ ಮಹಿಳೆ: ಹೊಸ ಗಿನ್ನೆಸ್ ರೆಕಾರ್ಡ್ ದಾಖಲು

02/10/2024

ಬಾಹ್ಯಾಕಾಶ ಯಾತ್ರೆ ನಡೆಸಿದ ಸೌದಿಯ ಮೊದಲ ಮಹಿಳೆ ಎಂಬ ಗಿನ್ನೆಸ್ ರೆಕಾರ್ಡ್ ಗೆ ಸೌದಿಯ ರಯನಾ ಬರ್ನಾವಿಕ್ ಸೇರ್ಪಡೆಯಾಗಿದ್ದಾರೆ. 2023 ಮೇ 21ರಂದು ಅಮೆರಿಕಾದ ಫ್ಲೋರಿಡಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸೌದಿ ಬಾಹ್ಯಾಕಾಶ ಸಂಚಾರಿಯಾಗಿದ್ದ ಅಲಿ ಅಲ್ ಕರ್ನಿ ಜೊತೆ ರಯಾನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲಯಕ್ಕೆ ಯಾತ್ರೆ ಮಾಡಿದ್ದರು. ಬಯೋಮೆಡಿಕಲ್ ಸೈನ್ಸ್ ನಲ್ಲಿ ಸಂಶೋಧಕಿಯಾಗಿದ್ದಾರೆ ಈ ರಯಾನ.

ಕಿಂಗ್ ಫೈಝಲ್ ಸ್ಪೆಷ ಲಿಸ್ಟ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನ ಜೊತೆ ಈ ರಯಾನ ಅವರ ಅಧಿಕೃತ ಜೀವನ ಆರಂಭವಾಯಿತು. ನ್ಯೂಜಿಲ್ಯಾಂಡಿನ ಒಟ್ಟಾಗೋ ವಿಶ್ವವಿದ್ಯಾಲಯದಿಂದ ಜೈವಿಕ ಇಂಜಿನಿಯರಿಂಗ್ ಮತ್ತು ಟಿಶು ಅಭಿವೃದ್ಧಿ ವಿಷಯದಲ್ಲೂ ಪದವಿಯನ್ನು ಪಡೆದಿರುವ ರಯಾನ ಅಲ್ ಪೈಸೆಲ್ ವಿಶ್ವವಿದ್ಯಾಲಯದಿಂದ ಬಯೋಮೆಡಿಕಲ್ ಸೈನ್ಸ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ