ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ: ಸಚಿವ ಸುನೀಲ್ ಕುಮಾರ್ - Mahanayaka
5:39 PM Thursday 14 - November 2024

ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ: ಸಚಿವ ಸುನೀಲ್ ಕುಮಾರ್

sunil kumar
16/08/2022

ಉಡುಪಿ:  ಸಾರ್ವಕರ್ ಭಾವಚಿತ್ರಕ್ಕೆ ಆಕ್ಷೇಪಣೆ ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಾವರ್ಕರ್ ಎರಡು ಕರಿನೀರಿನ ಶಿಕ್ಷೆ ಅನುಭವಿಸಿರುವ ಹೋರಾಟಗಾರ. ಸಾವರ್ಕರ್ ಅವರ ಬಗ್ಗೆ ಗೊತ್ತಾಗಲು ಅಂಡಾಮಾನ್ ಗೆ ಭೇಟಿ ಮಾಡಬೇಕು. ಸಾವರ್ಕರ್ ಬಗ್ಗೆ ಆಕ್ಷೇಪಣೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಸಾವರ್ಕರ ಆಕ್ಷೇಪಿಸುವುದು ಅಂದ್ರೆ ಸ್ವಾತಂತ್ರ್ಯವನ್ನು ಆಕ್ಷೇಪಿಸಿದಂತೆ. ಸಾವರ್ಕರ್ ಅಪ್ರತಿಮ ದೇಶಭಕ್ತ. ಪಿಎಫ್ ಐ  ವಿರೋಧಿಸುತ್ತದೆ ಎಂದರೆ ಸಾವರ್ಕರ್ ಫೋಟೋ ತೆಗೆಯಲು ಸಾಧ್ಯವಿಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.

ಟಿಪ್ಪು ಸಾವರ್ಕರ್ ಹೋಲಿಕೆ ಒಂದು ವ್ಯವಸ್ಥಿತ ಷಡ್ಯಂತ್ರ. ಸಣ್ಣ ಘಟನೆ ಇಟ್ಟುಕೊಂಡು ಅಶಾಂತಿ ಸೃಷ್ಟಿಸಲು ಪಿಎಫ್ ಐ ಸಂಘಟನೆ ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಸರಕಾರ ಇಂಥವರನ್ನು ಹದ್ದುಬಸ್ತಿನಲ್ಲಿ ಇಡುತ್ತದೆ ಎಂದರು.




ಪೊಲೀಸ್ ಇಲಾಖೆ, ಗೃಹ ಇಲಾಖೆ ಎಚ್ಚರಿಕೆ ಹೆಜ್ಜೆ ಇಡುತ್ತದೆ. ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ ಎಂದು ಸಚಿವ ಸುನಿಲ್ ಕುಮಾರ್ ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ