ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು
ಪುತ್ತೂರು: ಸ್ವಾತಂತ್ರ್ಯ ರಥದಲ್ಲಿ ಸಾರ್ವರ್ಕರ್ ಚಿತ್ರವನ್ನು ಬಳಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಥಕ್ಕೆ ಅಡ್ಡಿಪಡಿಸಿದೆ ಎಂದು ಆರೋಪಿಸಿ ಇಂದು ವಿವಿಧ ಸಂಘಟನೆಗಳು ಕಡಬ ಜಂಕ್ಷನ್ ನ ಶ್ರೀ ಮಹಾದೇವಿ ದೇವಸ್ಥಾನದ ದ್ವಾರದ ಎದುರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ವಿರುದ್ಧ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಹಿಂದುತ್ವ ಸಂಘಟಯ ಘಟಾನುಘಟಿ ನಾಯಕರು ಭಾಗಿಯಾಗಿದ್ದು, ಬಜರಂಗದಳದ ದಕ್ಷಿಣ ಪ್ರಾಂತ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಜಾಗರಣವೇದಿಕೆ ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಕೆದಿಲ, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವ ದಿನದಂದು ಜನಜಾಗೃತಿ ಗ್ರಾಮ ಸ್ವರಾಜ್ಯ ರಥಯಾತ್ರೆ ಹೊರಟಿದ್ದ ಸಂದರ್ಭದಲ್ಲಿ ರಥಯಾತ್ರೆಗೆ ಅಡ್ಡಿಪಡಿಸಿ, ಆರೋಪಿಗಳು ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ತಕ್ಷಣವೇ ಆರೋಪಿಗಳ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಾರ್ವರ್ಕರ್ ಚಿತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಾಳೆ(ಆ.17)ರಂದು ಪುತ್ತೂರಿನಲ್ಲಿ ವೀರ ಸಾರ್ವರ್ಕರ್ ರಥಯಾತ್ರೆಯನ್ನು ನಾವು ನಡೆಸಲಿದ್ದು, ಮುಂದಿನ ದಿನ ದೇಶ ವ್ಯಾಪಿ ನಡೆಸುತ್ತೇವೆ. ತಾಕತ್ ಇದ್ದರೆ, ಎಸ್ ಡಿಪಿಐ ರಥ ಯಾತ್ರೆಯನ್ನು ತಡೆಯಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.
ಇನ್ನಷ್ಟು ಸುದ್ದಿಗಳು…
ಸವರ್ಣೀಯರಿಂದ ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ | ಅಂಬೇಡ್ಕರ್ ಸೇನೆ
ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್
ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದೊಳಗೆ ಮೊಬೈಲ್ ಬಳಕೆ ನಿಷೇಧ | ಕಾರಣ ಏನು ಗೊತ್ತಾ?
ಅಪ್ರಾಪ್ತ ವಯಸ್ಸಿನ ಬಾಲಕನಿಂದ 3 ತಿಂಗಳ ಮಗುವಿನ ಮೇಲೆ ಅತ್ಯಾಚಾರ!
ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು
ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ
ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು