ಸರ್ಕಾರಿ ಶಾಲೆಗಳಲ್ಲಿ ಸಾವಯವ ಅಕ್ಷರ ಕೈ ತೋಟ ಯೋಜನೆ: ಡಾ.ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳಾವಕಾಶ ಇರುವ ಎಲ್ಲಾ ಶಾಲೆ ಗಳಲ್ಲಿ ಸಾವಯವ ಕೃಷಿ ಯ ಮೂಲಕ ಅಕ್ಷರ ಕೈ ತೋಟ ನಿರ್ಮಿಸುವ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಾವಯವ ಕೃಷಿ ಕ ಬಳಗ ಮಂಗಳೂರು ಇದರ ಸಹಯೋಗ ದಲ್ಲಿಂದು ಸಾವಯವ ಕೈತೋಟ , ಟೆರೇಸ್ ಗಾರ್ಡನ್ ತರಬೇತಿ ಶಿಬಿರವನ್ನು ಉದ್ಘಾಟಿ ಸಿ ಮಾತನಾಡುತ್ತಿದ್ದರು.
ಆರೋಗ್ಯ ಕರ ಸಮಾಜ ನಿರ್ಮಾಣದ ಹಿನ್ನಲೆಯಲ್ಲಿ ಸಾವಯವ ಕೈ ತೋಟ ನಿರ್ಮಾಣ, ನಮ್ಮ ಆರೋಗ್ಯ, ಮಣ್ಣಿನ ಆರೋಗ್ಯ ಸೇರಿದಂತೆ ಪರಿಸರ ಸ್ನೇಹಿ ಕಾರ್ಯಕ್ರಮ ಶ್ಲಾಘನೀಯ ಎಂದು ಡಾ.ಕುಮಾರ್ ತಿಳಿಸಿದ್ದಾರೆ.
ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಸಾವಯವ ಕೃಷಿಕರ ಗ್ರಾಹಕರ ಬಳಗದ ಪ್ರಧಾನ ಕಾರ್ಯ ದರ್ಶಿ ರತ್ನಾಕರ ಮಾತನಾಡುತ್ತಾ,ನಮ್ಮ ಅಡುಗೆ ಮನೆಯನ್ನು ವಿಷಯುಕ್ತ ಪದಾರ್ಥ ಗಳಿಂದ ಮುಕ್ತ ಗೊಳಿಸಲು ಸಾವಯವ ಕೃಷಿ ಅಗತ್ಯ. ನಮ್ಮ ಮನೆ ಯಂಗಳದಲ್ಲಿ, ಸಣ್ಣ ಬಾಲ್ಕನಿಯಲ್ಲಿ ತರಕಾರಿ, ಹೂವು ಬೆಳೆಯು ವುದು ಹೇಗೆ ಎಂಬುದನ್ನು ಈ ಶಿಬಿರದಲ್ಲಿ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಕೈತೋಟ ಕ್ರಾಂತಿ ಎಂಬ ಯೋಜ ನೆಯಡಿ ತರಬೇತಿ ನೀಡಲಿದ್ದಾರೆ. ನಗರದ ಮನೆಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ಕಾಲಮಾನಗಳ ಹೂವು ಮತ್ತು ತರಕಾರಿ ಗಳನ್ನು ಬೆಳೆಸುವು ದರ ಬಗ್ಗೆ ಈ ಬಳಗ ಜಾಗೃತಿ ಮೂಡಿಸುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಗಳಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್. ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಅಧ್ಯಕ್ಷರು ಜಿ ಆರ್ ಪ್ರಸಾದ್, ಸಂಪನ್ಮೂಲ ವ್ಯಕ್ತಿ ಶ್ರೀ ಹರಿಕೃಷ್ಣ ಕಾಮತ್ ಪುತ್ತೂರು ಸಾವಯವ ಕೈ ತೋಟ ತರಬೇತಿ, ಮಾಹಿತಿ ನೀಡಿ ದರು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka