ಸಂವಿಧಾನ ಪುನಃ ಬರೆಯುವ ಅಗತ್ಯವಿದೆ: ತೆಲಂಗಾಣ ಸಿಎಂ ಕೆ.ಸಿ.ಆರ್. ವಿವಾದಾತ್ಮಕ ಹೇಳಿಕೆ
ನವದೆಹಲಿ: ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎನ್ನುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್. ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೊಸ ಸಂವಿಧಾನ ತರುವ ಅವಶ್ಯಕತೆಯಿದೆ. ಇದಕ್ಕಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದೇನೆ. ದೇಶದಲ್ಲಿ ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಕೆ.ಸಿ.ಆರ್. ಹೇಳಿದ್ದಾರೆ.
ಈ ವಿಚಾರವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಲು ಮುಂಬೈಗೆ ತೆರಳಲಿದ್ದೇನೆ, ನಾವು ಸಂವಿಧಾನವನ್ನು ಪುನಃ ಬರೆಯಬೇಕಾಗಿದೆ. ಹೊಸ ಚಿಂತನೆ, ಹೊಸ ಸಂವಿಧಾನ ತರಬೇಕು ಎಂದು ತೆಲಂಗಾಣ ಸಿಎಂ ತಿಳಿಸಿದ್ದಾರೆ.
ಸಿಎಂ ಕೆ.ಸಿ.ಆರ್. ನೇತೃತ್ವದ ಟಿಆರ್‌ಎಸ್ ಸಂಸದರು ಜಂಟಿ ಅಧಿವೇಶನದಲ್ಲಿ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿದ್ದರು. ಅಲ್ಲದೆ, ರಾಷ್ಟ್ರಪತಿ ಭಾಷಣಕ್ಕೂ ಮುನ್ನ ಕೆ.ಸಿ.ಆರ್. ತಮ್ಮ ಪಕ್ಷದ ಸಂಸದರ ಜತೆ ಸಭೆ ನಡೆಸಿ ಕೇಂದ್ರ ಸರ್ಕಾರವನ್ನು ವಿರೋಧಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಲಂಗಾಣಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಟಿಆರ್‌ಎಸ್ ಸಂಸದರು ಆರೋಪಿಸಿದ್ದರು.
ಅಲ್ಲದೆ ಅವರು ಕೇಂದ್ರ ಬಜೆಟ್‌ನ್ನು ಶೂನ್ಯ ಬಜೆಟ್ ಎಂದು ಅವರು ಕರೆದಿದ್ದಾರೆ. ರೈತರು, ಬಡವರು, ಕೂಲಿ ವರ್ಗದವರಿಗೆ ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ ಎಂದವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೆಡ್ ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್ ದಂಪತಿ ಜಗಳ
ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ
ಬಜೆಟ್‌ನಲ್ಲಿ ‘ಬಡವರು’ ಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ
ಉ.ಪ್ರ. ವಿಧಾನಸಭಾ ಚುನಾವಣೆ: ಬಿಎಸ್ ಪಿಯಿಂದ ರವಿಪ್ರಕಾಶ್ ಮೌರ್ಯ ಅಯೋಧ್ಯೆ, ಅಮೇಥಿಯಿಂದ ರಾಗಿಣಿ ತಿವಾರಿ ಸ್ಪರ್ಧೆ
ಮನೆ ಛಾವಣಿ ಕುಸಿದು ಮೂವರು ಮಕ್ಕಳ ಸಾವು