ಸಾವಿನಲ್ಲೂ ಹಲವರಿಗೆ ಜೀವ ಕೊಟ್ಟ 14 ವರ್ಷದ ಬಾಲಕ - Mahanayaka
1:25 AM Wednesday 5 - February 2025

ಸಾವಿನಲ್ಲೂ ಹಲವರಿಗೆ ಜೀವ ಕೊಟ್ಟ 14 ವರ್ಷದ ಬಾಲಕ

ballaka
03/02/2022

ಬೀದರ್: ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಆತನ ಪಾಲಕರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಮಲನಗರ ಪಟ್ಟಣದ ಮಾಜಿ ತಾ.ಪಂ. ಅಧ್ಯಕ್ಷ ಶ್ರೀರಂಗ ಪರಿಹಾರ ಅವರ ಏಕೈಕ ಪುತ್ರ ಆದಿತ್ಯ (14) ಸೈಕಲ್ ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕ್ ಒಂದು ಡಿಕ್ಕಿ ಹೊಡೆದಿತ್ತು. ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಆತನನ್ನು ಮಹಾರಾಷ್ಟ್ರದ ಲಾತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದೆ.

ಪುತ್ರನ ಸಾವಿನ ಶೋಕದ ನಡುವೆ ಪೋಷಕರು ಮಗನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಬಾಲಕನ ದೇಹವನ್ನು ಲಾತೂರಿನಿಂದ ಸೊಲ್ಲಾಪುರಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಸಾಗಿಸಲಾಗಿದೆ. ಬಾಲಕನ ಕಣ್ಣು, ಕಿಡ್ನಿ, ಹೃದಯ ಹಾಗೂ ಲಿವರ್‌ಅನ್ನು ದಾನ ಮಾಡಲಾಗಿದೆ. ಆಂಬುಲೆನ್ಸ್‌ನಲ್ಲಿ 150 ಕಿ.ಮೀ. 70 ನಿಮಿಷಗಳಲ್ಲಿ ಕ್ರಮಿಸಿ ಆದಿತ್ಯ ಹಲವರಿಗೆ ಮರುಜೀವ ನೀಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಮಂತ್ರವಾದಿಯ ಬಂಧನ

ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿಯ ಬಂಧನ

ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ 7 ಮಂದಿಯ ಸೆರೆ

ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್‍ ನಲ್ಲೇ ತಡೆದ ಪ್ರಾಂಶುಪಾಲರು

ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಲಿರುವ ಅಲ್ಲು ಅರ್ಜುನ್: ಅಂದೇಕೆ ಭೇಟಿ ನೀಡಿರಲಿಲ್ಲ ಗೊತ್ತಾ?

 

ಇತ್ತೀಚಿನ ಸುದ್ದಿ