ಸಾವಿನಲ್ಲೂ ಒಂದಾದ ತಾಯಿ - ಮಗ - Mahanayaka

ಸಾವಿನಲ್ಲೂ ಒಂದಾದ ತಾಯಿ – ಮಗ

mandya thayi maga
24/01/2022

ಮಂಡ್ಯ: ಪ್ರೀತಿಯ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿಯೂ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.
ಲಕ್ಷ್ಮಮ್ಮ (70), ಕುಶ (43) ಮೃತಪಟ್ಟ ತಾಯಿ ಮಗ. ಲೋ ಬಿಪಿಯಿಂದ ಮನೆಯಲ್ಲೇ ಮಗ ಕುಶ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಐದೇ ನಿಮಿಷದಲ್ಲಿ ತಾಯಿ ಲಕ್ಷ್ಮಮ್ಮ ಕೂಡ ಕೊನೆಯುಸಿರೆಳೆದಿದ್ದಾರೆ.

ಮೃತ ಕುಶ ಅವರು ಬೆಂಗಳೂರಿನಲ್ಲಿ ಸ್ವಂತ ಸ್ಟುಡಿಯೋ ಇಟ್ಟುಕೊಂಡಿದ್ದರು. ಅನಾರೋಗ್ಯದಿಂದಾಗಿ 4 ತಿಂಗಳ ಹಿಂದೆ ಊರಿಗೆ ವಾಪಸ್ಸಾಗಿದ್ದರು ಎನ್ನಲಾಗಿದೆ. ತಾಯಿ, ಮಗನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಶಾಸಕ ಸುರೇಶ್ ಗೌಡ ಮೃತರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ನಾಪತ್ತೆಯಾಗಿದ್ದ ಬಸ್ ಮಾಲಕ ಶವವಾಗಿ ಪತ್ತೆ

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸರ್ಕಾರದ ಸಾಧನೆ: ಈಶ್ವರ ಖಂಡ್ರೆ

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ಬಸ್ ​ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ; ಯುವಕನಿಗೆ ಧರ್ಮದೇಟು

ನಿರ್ಮಾಪಕ ಉಮಾಪತಿ ಕೊಲೆಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಸೆರೆ

 

ಇತ್ತೀಚಿನ ಸುದ್ದಿ