ಸಾವಿರಕ್ಕೂ ಅಧಿಕ ಜನರನ್ನು ಬಲಿಪಡೆದ ಕೊರೊನಾ | ಊರೇ ಸುಡುಗಾಡಾಯ್ತು!
ನವದೆಹಲಿ: ಕೊರೊನಾ ಪ್ರಕರಣಗಳನ್ನು ಕಂಡು ಬೆಚ್ಚಿಬೀಳುತ್ತಿದ್ದ ದೇಶ ಇದೀಗ ಕೊರೊನಾ ಸಾವಿನ ಸಂಖ್ಯೆ ಕಂಡು ಶಾಕ್ ಗೆ ಒಳಗಾಗಿದೆ. ಹೌದು..! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಊರು ಸುಡುಗಾಡಾಯ್ತು ಎನ್ನುವ ಮಾತು ಇದೀಗ ಅಕ್ಷರಶಃ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಕೊರೊನಾ ವಿರುದ್ಧ ದೇಶವನ್ನು ಸಜ್ಜು ಮಾಡಲು ಸಾಕಷ್ಟು ಅವಕಾಶಗಳಿದ್ದರೂ, ನಿರ್ಲಕ್ಷ್ಯವಹಿಸಿದ ಪರಿಣಾಮ ಇಡೀ ದೇಶದಲ್ಲಿ ಕೊರೊನಾದಿಂದ ದೇಶವಾಸಿಗಳು ತಮ್ಮ ಬಂಧು ಬಳಗವನ್ನು ಕಳೆದುಕೊಂಡು ಅನಾಥರಾಗಿ ನಿಲ್ಲುವಂತಾಗಿದೆ.
ಪೂರ್ವ ದೆಹಲಿಯ ಗಾಜಿಪುರ ಸ್ಮಶಾನ ಫಾಟ್ನ ಪಾರ್ಕಿಂಗ್ ಪ್ರದೇಶದಲ್ಲಿ ನೂರಾರು ಮೃತದೇಹಗಳನ್ನ ಸುಡಲಾಗಿರುವ ಫೋಟೋ ವೈರಲ್ ಆಗಿದೆ. ಎಲ್ಲ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಈ ಫೋಟೋಗಳು ಪ್ರಕಟವಾಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಇನ್ನೂ ಸಾವಿನ ಸಂಖ್ಯೆ ಏರುತ್ತಲೇ ಇರುವುದರಿಂದಾಗಿ ಶವಸಂಸ್ಕಾರಕ್ಕಾಗಿ ಗಾಜಿಪುರ ಪ್ರದೇಶದಲ್ಲಿ ಈ ತಾತ್ಕಾಲಿಕ ಶವಾಗಾರವನ್ನು ಪೂರ್ವದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ನಿರ್ಮಿಸಿದೆ.