ತಲೆ ನೋವಾಗುತ್ತಿದೆ ಎಂದು ಕೋಣೆಗೆ ತೆರಳಿದ ಸ್ಯಾಕ್ಸೋಫೋನ್ ವಾದಕಿ ನೇಣಿಗೆ ಶರಣು
ಮಂಗಳೂರು: ತಲೆನೋವಾಗುತ್ತಿದೆ ಎಂದು ರೂಮಿಗೆ ತೆರಳಿದ್ದ ಸ್ಯಾಕ್ಸೋಫೋನ್ ವಾದಕಿಯೊಬ್ಬರು, ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಶಕ್ತಿನಗರ ಫ್ಲ್ಯಾಟ್ ವೊಂದರಲ್ಲಿ ನಡೆದಿದೆ.
ಮುಲ್ಕಿ ಮೂಲದ ಸ್ಯಾಕ್ಸೋಫೋನ್ ವಾದಕಿ 29 ವರ್ಷ ವಯಸ್ಸಿನ ಸುಜಾತಾ ದೇವಾಡಿಗ ಮೃತಪಟ್ಟವರು ಎಂದು ಗುರುತಿಸಲಾಗಿದೆ. ತಲೆ ನೋವಾಗುತ್ತಿದೆ ಎಂದು ತನ್ನ ಕೋಣೆಗೆ ಹೋದವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುಜಾತ ಅವರು ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದರು. ತಲೆ ನೋವೆಂದು ಕೋಣೆಗೆ ತೆರಳಿದ ಸುಜಾತಾ ಎಷ್ಟು ಹೊತ್ತಾದರೂ ವಾಪಸ್ ಬಾರದ ವೇಳೆ ಮನೆಯವರು ಕೋಣೆಗೆ ಹೋಗಿ ನೋಡಿದಾಗ ಸುಜಾತಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಆರ್ಥಿಕ ಸಂಕಷ್ಟದಿಂದಾಗಿ ಅವರು ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಯ ನಿರ್ಧಾರಗಳಿಂದ ದೂರವಿರಿ. ಮನಸ್ಸು ನಿಯಂತ್ರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ನೀವಿದ್ದರೆ, 9152987821 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಿರಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೆರೆಯಲ್ಲಿ ಮುಳುಗಿ 9ನೇ ತರಗತಿಯ ಇಬ್ಬರು ಬಾಲಕರು ಸಾವು
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಶಿವಲಿಂಗದ ಬಗ್ಗೆ ಅವಹೇಳನಾಕಾರಿ ಪೋಸ್ಟ್: ಎಐಎಂಐಎಂ ನಾಯಕ ಅರೆಸ್ಟ್
ಮೊಮ್ಮಗುವನ್ನು ನೋಡಲು ಆಸ್ಪತ್ರೆಗೆ ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!
ಕಾಂಗ್ರೆಸ್ ತೊರೆಯುವ ಮೊದಲು ಹಾರ್ದಿಕ್ ಪಟೇಲ್ ಹೈಕಮಾಂಡ್ ಗೆ ಹೇಳಿದ್ದೇನು?