ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!

kerala
11/04/2022

ಕೋಯಿಕ್ಕೋಡ್‌:  ಸೈಕಲ್ ಕೊಡಿಸು ಎಂದು ಮಗಳು ಹಠ ಮಾಡಿದ್ದಕ್ಕೆ ಪಾಪಿ ತಂದೆಯೋರ್ವ ಮಗಳ ಮೇಲೆ ಕುದಿಯುತ್ತಿರುವ ನೀರನ್ನು ಎರಚಿದ ಅಮಾನವೀಯ ಘಟನೆ ಕೇರಳದ  ತಾಮರಸ್ಸೆರಿಯಲ್ಲಿ ನಡೆದಿದೆ.

ತಾಮರಸ್ಸೆರಿ ಮೂಲದ ಶಾಜಿ ಎಂಬಾತ ಈ ದುಷ್ಕೃತ್ಯವನ್ನು ಎಸಗಿದ್ದಾನೆ. ಘಟನೆಯಲ್ಲಿ ಮಗುವಿನ ತಾಯಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

9 ವರ್ಷದ ಬಾಲಕಿ ತನಗೆ ಸೈಕಲ್ ಬೇಕು ಎಂದು ತಂದೆಯ ಬಳಿಯಲ್ಲಿ ಹಠ ಹಿಡಿದಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಶಾಜಿ, ಕುದಿಯುತ್ತಿರುವ ನೀರನ್ನು ತಾಯಿ ಮತ್ತು ಮಗಳ ಮೇಲೆ ಎರಚಿದ್ದಾನೆ. ಬಳಿಕ ಮನ ಬಂದಂತೆ ಥಳಿಸಿದ್ದಾನೆ.

ಶಾಜಿ ಹಿಂದಿನಿಂದಲೇ ತನ್ನ ಕುಟುಂಬಕ್ಕೆ ತೀವ್ರವಾಗಿ ಹಿಂಸೆ ನೀಡುತ್ತಿದ್ದ. ಹಣ ನೀಡುವಂತೆ ಪತ್ನಿಯನ್ನು ಆಗಾಗ ಪೀಡಿಸಿ ಹಲ್ಲೆ ನಡೆಸುತ್ತಿದ್ದ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ  ಚೈಲ್ಡ್‌ಲೈನ್ ಮಗು ಮತ್ತು ತಾಯಿಯನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಕಾರ್ಖಾನೆಯಲ್ಲಿ ಸ್ಫೋಟ:  6 ಮಂದಿಯ ದಾರುಣ ಸಾವು

ರೋಪ್ ವೇ ಕೇಬಲ್ ಕಾರುಗಳ ಡಿಕ್ಕಿ: ರೋಪ್ ವೇಯಲ್ಲಿ ಸಿಲುಕಿದ 50ಕ್ಕೂ ಅಧಿಕ ಜನ

ಮಹಾತ್ಮ ಜ್ಯೋತಿಬಾ ಫುಲೆ ಎಂಬ ಸತ್ಯಶೋಧಕ | ಬಾಲಾಜಿ ಎಂ. ಕಾಂಬಳೆ

ಮಿತಿ ಮೀರಿದರೆ, ಕಾನೂನು ಕೈಗೆತ್ತಿಕೊಂಡರೆ ಕ್ರಮ: ಹಿಂದೂ ಸಂಘಟನೆಗಳಿಗೆ ಮಾಧುಸ್ವಾಮಿ ಎಚ್ಚರಿಕೆ

 

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version