65 ವರ್ಷದವರೆಗೆ SBI ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಸುವರ್ಣಅವಕಾಶ : ಒಟ್ಟು 1, 194 ಹುದ್ದೆಗಳಿಗೆ ಅರ್ಜಿ ಆಹ್ವಾನ - Mahanayaka
9:11 PM Saturday 22 - February 2025

65 ವರ್ಷದವರೆಗೆ SBI ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಸುವರ್ಣಅವಕಾಶ : ಒಟ್ಟು 1, 194 ಹುದ್ದೆಗಳಿಗೆ ಅರ್ಜಿ ಆಹ್ವಾನ

state bank of india
22/02/2025

SBI Bank Concurrent Auditor Recruitment 2025 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 1,194 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದಂತಹ ಹುದ್ದೆಗಳು ಯಾವುವು ಎಂದರೆ “ಏಕಕಾಲಿಕ ಲೆಕ್ಕ ಪರಿಶೋಧಕ” ಅಥವಾ “Concurrent Auditor”. ಈ ಹುದ್ದೆಗಳು ಕೇವಲ SBI ಬ್ಯಾಂಕ್ ನಲ್ಲಿ ನಿವೃತ್ತಿ ಹೊಂದಿದದಂತಹ ಭಾರತೀಯ ನಾಗರಿಕರಿಗೆ ಮಾತ್ರ ಮಿಸಲೀಡಲಾಗಿದೆ.

ಇತರೆ ಅರ್ಹತೆಗಳು:

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು 58 ವರ್ಷ ದಾಟಿರಬೇಕು ಮತ್ತು 30 ವರ್ಷ ಸಂಬಂಧಪಟ್ಟ ವಿಭಾಗದಲ್ಲಿ ಸೇವಾನುಭವ ಹೊಂದಿರಬೇಕು.

65 ವರ್ಷದವರೆಗೆ SBI ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಸುವರ್ಣಅವಕಾಶ :

ಹೌದು, ಈ ನೇಮಕಾತಿಯಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ ಕನಿಷ್ಠ 1 ವರ್ಷದದಿಂದ ಗರಿಷ್ಟ 3 ವರ್ಷದವರೆಗೆ ಅಥವಾ 65 ವರ್ಷ ವಯಸ್ಸು ಆಗುವವರೆಗೆ ಸೇವೆ ಸಲ್ಲಿಸುವ ಅವಕಾಶವಿದೆ.

ಆಕರ್ಷಕ ಮಾಸಿಕ ಸಂಬಳ : ಹೌದು, ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು 80,000ರೂ. ಇರಲಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೇಗೆ ನೇಮಕಾತಿ ಮಾಡಿಕೊಳ್ಳಲಾಗುವುದು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ ಕನ್ ಕರೆಂಟ್ ಆಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸುವುದರ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆಗೆ ನಿಗದಿತ ದಿನಾಂಕಗಳು :

* ಅರ್ಜಿ ಸಲ್ಲಿಸಲು ಆರಂಭವಾಗಿರುವ ದಿನಾಂಕ – 18/02/2025

* ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ – 15/03/2025

ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ : https://bank.sbi/careers


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ