SBI ಗ್ರಾಹಕರಿಗೆ ಸಿಹಿ ಸುದ್ದಿ: ಸಾಲದಿಂದ ಮುಕ್ತರಾಗಲು ಬ್ಯಾಂಕ್ ನೀಡಿದೆ ಹೊಸ ಅವಕಾಶ
ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಸಾಲ ಪಡೆದಿರುವವರಿಗೆ ಸುಸ್ತಿ ಸಾಲ ತೀರಿಸಲು ಬ್ಯಾಂಕ್ ನಿಂದ ಸುವರ್ಣ ಅವಕಾಶ ಕಲ್ಪಿಸಲಾಗಿದೆ. 2020-21ನೇ ಸಾಲಿನ ಋಣ ಸಮಾಧಾನ ಯೋಜನೆ ರೂಪಿಸಿರುವ ಬ್ಯಾಂಕ್ ಏಕ ಕಾಲದಲ್ಲಿ ಸಾಲವನ್ನುಇತ್ಯರ್ಥ ಪಡಿಸಲು ಅವಕಾಶ ನೀಡುವ ಮೂಲಕ ಸಿಹಿಸುದ್ದಿ ನೀಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಸುಸ್ತಿ ಸಾಲಗಾರರು ಋಣಮುಕ್ತರಾಗಲು ಸುವರ್ಣ ಅವಕಾಶ ನೀಡಲಾಗಿದೆ. ಋಣ ಸಮಾಧಾನ ಯೋಜನೆ 2020-21 ರಂತೆ 20ಲಕ್ಷ ರೂ. ಗಳವರೆಗೆ ಸುಸ್ತಿದಾರ ಸಾಲಗಾರರಿಗೆ ಏಕ ಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(ಓ ಟಿ ಸಿ) ಜಾರಿಗೊಳಿಸಲಾಗಿದೆ.
ಪಾವತಿಸಲು ಬಾಕಿ ಇರುವ ಸಾಲದಲ್ಲಿ ಶೇ15ರಿಂದ90ರವರೆಗೆ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿದೆ. ಈ ಯೋಜನೆಯಲ್ಲಿ ಬಾಕಿ ಪಾವತಿಸಿದವರಿಗೆ ಮರು ಸಾಲ ಪಡೆಯಲು ಅದೇ ದಿನ ಅವಕಾಶ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಯೋಜನೆಯು ವ್ಯವಸಾಯ ಸಾಲ, ಸಣ್ಣ ಮತ್ತು ಮಧ್ಯಮ ಉದ್ಯೋಗ ಸಾಲ, ಶೈಕ್ಷಣಿಕ ಸಾಲ ಮತ್ತು ರೂ.5 ಲಕ್ಷದವರೆಗಿನ ಗೃಹ ಸಾಲಗಳಿಗೂ ಅನ್ವಯಿಸಲಿದೆ. ಇಂತಹ ಸುವರ್ಣಾವಕಾಶ ಯೋಜನೆಯು 31-01-2021ರಂದು ಕೊನೆಗೊಳ್ಳಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖಾಧಿಕಾರಿಗಳನ್ನು ಭೇಟಿ ಮಾಡಬಹುದಾಗಿದೆ.