ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಎಲ್ಲ ಅವಮಾನ, ದೌರ್ಜನ್ಯಗಳು ಅಪರಾಧವಲ್ಲ | ಸು.ಕೋರ್ಟ್ - Mahanayaka
8:09 PM Saturday 7 - September 2024

ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಎಲ್ಲ ಅವಮಾನ, ದೌರ್ಜನ್ಯಗಳು ಅಪರಾಧವಲ್ಲ | ಸು.ಕೋರ್ಟ್

06/11/2020

ನವದೆಹಲಿ:  ಎಸ್ಸಿ- ಎಸ್ಟಿ  ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಎಲ್ಲ ದಲಿತ ಅಥವಾ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಗಳಿಗೆ ಮಾಡುವ ಎಲ್ಲ ದೌರ್ಜನ್ಯ, ಅವಮಾನಗಳು ಅಥವಾ ಬೆದರಿಕೆಗಳು ಅಪರಾಧವಾಗುವುದಿಲ್ಲ  ಎಂದು ಸುಪ್ರೀಂ ಕೋರ್ಟ್ ನ ತ್ರಿ ಸದಸ್ಯ ನ್ಯಾಯಪೀಠ ಗುರುವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಈ ಅಚ್ಚರಿಯ ತೀರ್ಪು ನೀಡಿದೆ.  ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅವಮಾನ,  ಬೆದರಿಕೆ ನಡೆದರೆ ಮಾತ್ರವೇ ಕಾನೂನಿನಡಿಯಲ್ಲಿ ಅಪರಾಧವಾಗುತ್ತದೆ ಎಂದು ಹೇಳಿದೆ.

ದಲಿತ ಮಹಿಳೆಯನ್ನು ನಿಂದಿಸಿದ ಕಾರಣಕ್ಕೆ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ಹಿತೇಶ್ ಶರ್ಮಾ ಎಂಬಾತ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಾ ಈ ತೀರ್ಪು ನೀಡಿದೆ. ಈ ತೀರ್ಪು ಇದೀಗ ಚರ್ಚೆಗೀಡಾಗಿದೆ.


Provided by

ಇತ್ತೀಚಿನ ಸುದ್ದಿ