ಶಾಹಿ ಜುಮಾ ಮಸೀದಿಯ ಪ್ರವೇಶ ದ್ವಾರದ ಬಳಿಯ ಬಾವಿಯಲ್ಲಿ ಪೂಜೆಗೆ ನೀಡಿದ್ದ ಅನುಮತಿ: ಸುಪ್ರೀಂಕೋರ್ಟ್‌ನಿಂದ ತಡೆ
ಸಂಭಾಲ್ ನ ಶಾಹಿ ಜುಮಾ ಮಸೀದಿಯ ಪ್ರವೇಶ ದ್ವಾರದ ಬಳಿ ಇರುವ ಬಾವಿಯಲ್ಲಿ ಪೂಜೆಗೆ ನೀಡಲಾಗಿದ್ದ ಅನುಮತಿಗೆ ಸುಪ್ರೀಂ ಕೋರ್ಟ್ ತಡೆ ಹೇರಿದೆ. ಶಾಹಿ ಜುಮ್ಮಾ ಮಸೀದಿ ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಸಜೀವ್ ಖನ್ನ ಮತ್ತು ಸಂಜಯ್ ಕುಮಾರ್ ಅವರ ನೇತೃತ್ವದ ಪೀಠ ಈ ಆದೇಶ ನೀಡಿದೆ.
2024 ನವೆಂಬರ್ 19 ರಂದು ಸಂಭಾಲ್ ನ ಸ್ಥಳೀಯ ನ್ಯಾಯಾಧೀಶ ಆದಿತ್ಯ ಸಿಂಗ್ ಅವರು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾಕ್ಕೆ ಮಸೀದಿಯ ಸರ್ವೆ ನಡೆಸುವಂತೆ ಆದೇಶಿಸಿದರು. ಆ ಬಳಿಕ ಅಲ್ಲಿ ಪ್ರತಿಭಟನೆ ನಡೆಯಿತು ಮತ್ತು ಐದು ಮಂದಿ ಸಾವಿಗೀಡಾದರು. ಇದರ ಬೆನ್ನಿಗೆ ಸುಪ್ರೀಂ ಕೋರ್ಟ್ ನಲ್ಲಿ 1991ರ ಆರಾಧನಾ ಸ್ಥಳಗಳ ರಕ್ಷಣಾ ಕಾಯ್ದೆಯ ಸುತ್ತ ಚರ್ಚೆ ನಡೆಯಿತು ಮತ್ತು ಇನ್ನು ಮುಂದೆ ಯಾವುದೇ ಇಂಥ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು ಎಂದು ಎಲ್ಲಾ ನ್ಯಾಯಾಲಯಗಳಿಗೆ ಸೂಚಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj