ಯುವಜನತೆಗೆ ಸಂತಸದ ಸುದ್ದಿ; ಉದ್ದಿಮೆ ಪ್ರಾರಂಭಿಸಲು ಆಸಕ್ತರು ಈ ಸುದ್ದಿ ಓದಿ - Mahanayaka
1:56 AM Monday 16 - September 2024

ಯುವಜನತೆಗೆ ಸಂತಸದ ಸುದ್ದಿ; ಉದ್ದಿಮೆ ಪ್ರಾರಂಭಿಸಲು ಆಸಕ್ತರು ಈ ಸುದ್ದಿ ಓದಿ

15/02/2021

ಹಾಸನ: 2020-21ನೇ ಸಾಲಿನಲ್ಲಿ ಆತ್ಮನಿರ್ಭರ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿಗಳ (Scheme For Formalization Of Micro Food Processing Enterprises: PMFME) ಮಹತ್ತರವಾದ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸುತ್ತಿದೆ. ಈ ಹೊಸ ಯೋಜನೆಯನ್ನು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತದೆ.

ತೆಂಗು ಆಧಾರಿತ ಆಹಾರ ಸಂಸ್ಕರಣಾ ಉತ್ಪನ್ನಗಳಾದ ವರ್ಜಿನ್ ತೆಂಗಿನ ಎಣ್ಣೆ, ಕೊಬ್ಬರಿ ಪೌಡರ್, ತೆಂಗಿನ ಹಾಲು, ತೆಂಗಿನ ಕೆನೆ ತೆಗೆದ ಹಾಲು, ತೆಂಗಿನ ಕ್ರೀಮ್, ತೆಂಗಿನ ಚಿಪ್ಸ್, ತೆಂಗಿನ ಎಣ್ಣೆ, ಕೊಬ್ಬರಿ, ತೆಂಗಿನ ಎಳನೀರು ಆಧಾರಿತ ಉತ್ಪನ್ನಗಳಾದ ನೀರಾ, ವನೇಗಾರ್, ಸ್ಕ್ವಾಷ್, ತೆಂಗಿನ ಬೆಲ್ಲ, ತೆಂಗಿನ ಬಿಸ್ಕೇಟ್ಸ್, ತೆಂಗಿನ ಬರ್ಫಿಗಳನ್ನು ತಯಾರಿಸುವಂತಹ ಕೈಗಾರಿಕಾ ಘಟಕಗಳನ್ನು ನೂತನವಾಗಿ ಪ್ರಾರಂಭಿಸಲು, ವಿಸ್ತರಿಸಲು, ನವೀಕರಿಸಲು ಮತ್ತು ತೆಂಗು ಹೊರತು ಪಡಿಸಿ ಇತರೆ ಆಹಾರ ಉತ್ಪನ್ನ ಕೈಗಾರಿಕ ಘಟಕಗಳಡಿ ಈಗಾಗಲೇ ಕ್ರಿಯಾಶೀಲವಾಗಿರುವ ಘಟಕಗಳನ್ನು ವಿಸ್ತರಣೆಗೊಳಿಸಲು ಕಿರು ಉದ್ದಿಮೆದಾರರು ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಘಗಳು, ಸಹಕಾರಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಯೋಜನಾ ವೆಚ್ಚದ ಶೇ. 35ರಷ್ಟನ್ನು(ಗರಿಷ್ಠ ರೂ.10 ಲಕ್ಷ) ಸರ್ಕಾರವು ಸಹಾಯಧನವಾಗಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ