ನವೆಂಬರ್ 17ರಂದೂ ಶಾಲಾ-ಕಾಲೇಜು ಆರಂಭ ಅನುಮಾನ!
25/10/2020
ಶಿವಮೊಗ್ಗ: ನವೆಂಬರ್ 17ರಿಂದ ಶಾಲಾ ಕಾಲೇಜು ಆರಂಭವಾಗುತ್ತದೆ ಎಂದು ಹೇಳಲಾಗಿತ್ತು ಆದರೆ, ಇದೀಗ ನವೆಂಬರ್ 17ರಂದೂ ಶಾಲಾ ಕಾಲೇಜುಗಳು ಆರಂಭವಾಗುವುದು ಅನುಮಾನ ಎಂದು ಹೇಳಲಾಗಿದೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಹೇಳಿಕೆಯೊಂದು ಈ ಅನುಮಾನಗಳಿಗೆ ಕಾರಣವಾಗಿದೆ. ನಗರದಲ್ಲಿಂದ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಲಾ ಆರಂಭಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು, ತಜ್ಞರ ಅಭಿಪ್ರಾಯದ ನಿರ್ಧಾರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯಕ್ಕೆ ಎರಡು ಸಂಕಷ್ಟ ಬಂದಿದೆ. ಒಂದು ಕೊರೋನಾ ಸೋಂಕಿನ ಹಾವಳಿಯಾದ್ರೇ, ಮತ್ತೊಂದು ಉತ್ತರ ಕರ್ನಾಟಕದ ನೆರೆ ಪರಿಹಾರವಾಗಿದೆ. ಎರಡನ್ನೂ ಸಮರ್ಪಕವಾಗಿ ನಿಭಾಯಿಸುವಂತ ಕೆಲಸವನ್ನು ಮಾಡುತ್ತಿರುವುದಾಗಿ ಸಿಎಂ ಹೇಳಿದರು.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ