ಶಾಲೆಗೆ ಶೇಂದಿ ತಂದ ವಿದ್ಯಾರ್ಥಿ ಮುಚ್ಚಳ ತೆರೆಯುವ ವೇಳೆ ಸಿಕ್ಕಿ ಬಿದ್ದ!: ಮುಂದೆ ಆಗಿದ್ದೇನು?
ಕೇರಳ: ಶಾಲೆಗೆ ಶೇಂದಿ(ಅಮಲು ಪಾನೀಯ) ತಂದ ವಿದ್ಯಾರ್ಥಿಯೋರ್ವ ಸಿಕ್ಕಿ ಬಿದ್ದಿದ್ದು, ಘಟನೆಯ ಬಳಿಕ ಅಬಕಾರಿ ಅಧಿಕಾರಿಗಳು ಕ್ರಮಕೈಗೊಂಡು ವಿದ್ಯಾರ್ಥಿಗೆ ಕೌನ್ಸೆಲಿಂಗ್ ನೀಡಲು ಮುಂದಾಗಿದ್ದಾರೆ.
ಕೇರಳ ಮಾಧ್ಯಮಗಳ ವರದಿ ಪ್ರಕಾರ, ವಿದ್ಯಾರ್ಥಿಯು ಯೂಟ್ಯೂಬ್ ನೋಡಿ ಶೇಂದಿ ತಯಾರಿಸಲು ಕಲಿತಿದ್ದ. ಮನೆಯಲ್ಲಿ ಶೇಂದಿ ತಯಾರಿಸಿ ಶಾಲೆಗೆ ತಂದಿದ್ದ. ಶೇಂದಿಯ ಬಾಟಲಿಗೆ ಮುಚ್ಚಳ ಹಾಕಿದ್ದ ವಿದ್ಯಾರ್ಥಿ ಶಾಲೆಯಲ್ಲಿ ಮುಚ್ಚಳ ತೆಗೆದಿದ್ದು, ಈ ವೇಳೆ ಮುಚ್ಚಳ ಜೋರಾಗಿ ತೆರೆದುಕೊಂಡಿದ್ದು, ಉಳಿದ ವಿದ್ಯಾರ್ಥಿಗಳ ಮೈ ಮೇಲೆ ಶೇಂದಿ ಚೆಲ್ಲಿದೆ.
ಉಳಿದ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಚಾರ ತಿಳಿಸಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ. ಬಳಿಕ ಶಿಕ್ಷಕರು ವಿದ್ಯಾರ್ಥಿಯ ಮನೆಗೆ ಹೋಗಿ ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯು ಯೂಟ್ಯೂಬ್ ನೋಡುವ ಮೂಲಕ ಪಾನೀಯ ತಯಾರಿಸಲು ಕಲಿತಿದ್ದಾನೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಗಳು ಹೇಳಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka