ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ - Mahanayaka
10:12 AM Thursday 12 - December 2024

ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ

school reopen
25/10/2021

ಬೆಂಗಳೂರು: ಕೊವಿಡ್ 19 ತುರ್ತು ಆರೋಗ್ಯ ಪರಿಸ್ಥಿತಿಯಿಂದ ಮುಚ್ಚಲಾಗಿದ್ದ 1ರಿಂದ 5ನೇ ತರಗತಿ ಶಾಲೆಗಳು ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದೆ. ಶೇ.50ರಷ್ಟು ಹಾಜರಾತಿಯಲ್ಲಿ ಶಾಲೆ ಆರಂಭಿಸಲು ಸರ್ಕಾರ ಸದ್ಯ ಸೂಚನೆಯನ್ನು ನೀಡಿದೆ.

ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜೊತೆಗೆ ಕೊವಿಡ್ ನಿಯಮಗಳಂತೆ ತರಗತಿಗಳು ಆರಂಭವಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಇನ್ನುಳಿದ ಎರಡು ದಿನಗಳಲ್ಲಿ ಶಾಲೆ ಕೊಠಡಿಯನ್ನು ಸ್ವಚ್ಛಗೊಳಿಸಲು, ಸ್ಯಾನಿಟೈಸರ್ ಗೆ ಅವಕಾಶ ನೀಡಬೇಕು ಎಂದು ಹೇಳಲಾಗಿದೆ.

ಒಂದು ದಿನ ರಜೆ, ಒಂದು ದಿನ ತರಗತಿ ನಡೆಸಲಾಗುವುದು.  ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿ ಬೇಕು. ಅನುಮತಿ ಪತ್ರದಲ್ಲಿ ವಿದ್ಯಾರ್ಥಿ ಕೊವಿಡ್ ಸೋಂಕು ಇಲ್ಲದೇ ಇರುವುದನ್ನು ಪೋಷಕರು ದೃಢೀಕರಿಸಿರಬೇಕು. ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.

ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ ನೀಡಲಾಗಿದೆ 15ರಿಂದ  20 ಮಕ್ಕಳ ತಂಡ ರಚಿಸಿ ಪಾಠ ಮಾಡಬೇಕು ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ

ಫೋಟೋ ಹಾಕಿಲ್ಲ ಅಂತ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೇ ಬಂದಿಲ್ಲ, ಇನ್ನು ಸಿಎಂ ಸ್ಥಾನ ಬಿಡ್ತಾರಾ? | ಕುಮಾರಸ್ವಾಮಿ ಪ್ರಶ್ನೆ

ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ನಿಧಿಯ ಆಸೆಗೆ ಪತ್ನಿಯನ್ನು ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ ವೈದ್ಯ!

ಇತ್ತೀಚಿನ ಸುದ್ದಿ