ಸ್ಪ್ಯಾನಿಷ್ ಬಾವಲಿ ಗುಹೆಯಲ್ಲಿ 6,000 ವರ್ಷ ಹಳೆಯ ಚಪ್ಪಲಿಗಳು ಪತ್ತೆ: ಯುರೋಪಿನ ಅತ್ಯಂತ ಹಳೆಯ ಬೂಟುಗಳು ಇದು..! - Mahanayaka

ಸ್ಪ್ಯಾನಿಷ್ ಬಾವಲಿ ಗುಹೆಯಲ್ಲಿ 6,000 ವರ್ಷ ಹಳೆಯ ಚಪ್ಪಲಿಗಳು ಪತ್ತೆ: ಯುರೋಪಿನ ಅತ್ಯಂತ ಹಳೆಯ ಬೂಟುಗಳು ಇದು..!

01/10/2023

ಯುರೋಪಿನ 6 ಸಾವಿರ ವರ್ಷಗಳಷ್ಟು ಹಳೆಯ ಬೂಟುಗಳು ಪತ್ತೆಯಾದ ಘಟನೆ ಸ್ಪ್ಯಾನಿಷ್ ಬಾವಲಿ ಗುಹೆಯಲ್ಲಿ ನಡೆದಿದೆ. ಅಚ್ಚರಿ ಅಂದ್ರೆ ಈ ಬೂಟುಗಳು ಸಂಪೂರ್ಣವಾಗಿ ಗಟ್ಟಿಮುಟ್ಟಾಗಿ ಬೆರಗು ಮೂಡಿಸಿದೆ. ಈ ಶೂಗಳನ್ನು ನೋಡಿದ ಸ್ವತಃ ವಿಜ್ಞಾನಿಗಳು ಬೆಚ್ಚಿಬಿದ್ದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡೈಲಿಮೇಲ್ ವರದಿಯು, ಈ ಬೂಟುಗಳು ನೇಯ್ದ ಬುಟ್ಟಿಗಳಂತೆ ಇದೆ. ಮರದ ಕಲಾಕೃತಿಗಳೊಂದಿಗೆ ಕಂಡುಬಂದಿವೆ. ವಿಜ್ಞಾನಿಗಳ ತಂಡವು ಈ ಇತಿಹಾಸ ಪೂರ್ವ ಪ್ಲಿಮ್ಸಾಲ್‌ಗಳನ್ನು ಪರೀಕ್ಷಿಸಿದಾಗ, ಅತ್ಯಂತ ಹಳೆಯ ಶೂ ಎಸ್ಪಾರ್ಟೊ ಗ್ರಾಸ್​ ಎಂಬ ಫೈಬರ್‌ನಿಂದ ನೇಯ್ದ ಚಪ್ಪಲಿಯಾಗಿದ್ದು, ಇದು ಆಧುನಿಕ ಎಸ್ಪಾಡ್ರಿಲ್ ಶೂಗೆ ನಿಕಟ ಹೋಲಿಕೆಯನ್ನು ಹೊಂದಿದೆ ಎಂದು ಅವರು ಕಂಡುಕೊಂಡರು.

ಇದು 2008ರಲ್ಲಿ ಅರ್ಮೇನಿಯಾದಲ್ಲಿ ಪತ್ತೆಯಾದ 5,500 ವರ್ಷಗಳಷ್ಟು ಹಳೆಯದಾದ ಲೆದರ್ ಶೂಗಿಂತ ಈ ಶೂ ಹಳೆಯದಾಗಿದೆ. ಕಾರ್ಬನ್ ಡೇಟಿಂಗ್ ಕಲಾಕೃತಿಗಳ ಸಂಗ್ರಹವು ಹಿಂದೆ ಯೋಚಿಸಿದ್ದಕ್ಕಿಂತ ಸರಿಸುಮಾರು 2,000 ವರ್ಷಗಳಷ್ಟು ಹಳೆಯದಾಗಿದೆ ಎಂದು ತಂಡ ಹೇಳಿದೆ.

ಗುಹೆಯೊಳಗೆ ಕಂಡುಬರುವ ಇತರ ವಸ್ತುಗಳೆಂದರೆ ನೇಯ್ದ ಬುಟ್ಟಿಗಳು ಮತ್ತು ಸುತ್ತಿಗೆಗಳು ಮತ್ತು ಮೊನಚಾದ ಕೋಲುಗಳಂತಹ ಮರದ ಉಪಕರಣಗಳು. 76 ವಸ್ತುಗಳ ಪೈಕಿ ಕೆಲವು 9,500 ವರ್ಷಗಳ ಹಿಂದೆ ತಯಾರಿಸಲ್ಪಟ್ಟವು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಇದು ಬೇಟೆಗಾರರ ಸಮಾಜಗಳಲ್ಲಿ ಬುಟ್ಟಿ ತಯಾರಿಕೆಯ ಮೊದಲ ಪುರಾವೆಯಾಗಿದೆ.

ಸಂಶೋಧಕರು ಸಂಗ್ರಹದಲ್ಲಿರುವ ಹಲವಾರು ಬುಟ್ಟಿಗಳು ಮತ್ತು ಇತರ ಮರದ ಕಲಾಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ಈ ವಸ್ತುಗಳು “ಯುರೋಪಿನ ಆರಂಭಿಕ-ಮಧ್ಯ ಹೊಲೊಸೀನ್ ಜನಸಂಖ್ಯೆಯ ಸಂಕೀರ್ಣತೆಯ ಬಗ್ಗೆ ಅದ್ಭುತ ದೃಷ್ಟಿಕೋನಗಳನ್ನು ತೆರೆಯುತ್ತವೆ” ಎಂದು ಅವರು ಹೇಳಿದರು. ಬುಟ್ಟಿಗಳು ಮತ್ತು ಚಪ್ಪಲಿಗಳೆರಡೂ ತಯಾರಕರು ಸ್ಥಳೀಯ ಪರಿಸರದಲ್ಲಿನ ಸಸ್ಯ ಸಂಪನ್ಮೂಲಗಳ ಬಗ್ಗೆ ವಿಸ್ತೃತ ಜ್ಞಾನವನ್ನು ಹೊಂದಿದ್ದರು ಮತ್ತು ಉನ್ನತ ಮಟ್ಟದ ಪರಿಣತಿಯನ್ನು ಹೊಂದಿದ್ದರು ಎಂದು ಸಂಶೋಧಕರು ಗಮನಿಸಿದ್ದಾರೆ.

ಇತ್ತೀಚಿನ ಸುದ್ದಿ