ಎಸ್‌ ಸಿಎಸ್‌ ಪಿ/ಟಿಎಸ್‌ ಪಿ ಕ್ರಿಯಾಯೋಜನೆಗೆ 26 ಸಾವಿರ ಕೋಟಿ ರೂ ಅನುಮೋದನೆ - Mahanayaka
3:29 PM Wednesday 5 - February 2025

ಎಸ್‌ ಸಿಎಸ್‌ ಪಿ/ಟಿಎಸ್‌ ಪಿ ಕ್ರಿಯಾಯೋಜನೆಗೆ 26 ಸಾವಿರ ಕೋಟಿ ರೂ ಅನುಮೋದನೆ

yediyurappa
03/07/2021

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆ ಅಡಿಯಲ್ಲಿ 2021-22ನೇ ಸಾಲಿನ 26,005 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಪ್ರಸಕ್ತ ವರ್ಷ ಎಸ್‌ ಸಿಎಸ್‌ ಪಿ ಅಡಿ 18,331,54 ಕೋಟಿ ರೂ. ಹಾಗೂ ಎಸ್‌ಟಿಎಸ್‌ ಪಿ ಅಡಿ 7,673,47 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು  ಮಾಹಿತಿ ನೀಡಿದರು.

2021-22ನೇ ಸಾಲಿನ 35 ಅಭಿವೃದ್ಧಿ ಇಲಾಖೆಗಳ ಮೂಲಕ ಅನುದಾನ ಹಂಚಿಕೆ ಮಾಡಲಾಗುವುದು. ಕಳೆದ ಆರ್ಥಿಕ ವರ್ಷದಲ್ಲಿ ನೀಡಲಾಗಿದ್ದ ಯೋಜನೆಯ ಅನುದಾನವನ್ನು ಬಾಕಿ ಉಳಿಸಿಕೊಂಡಿಲ್ಲ. 2020-21ರ ವರ್ಷದಲ್ಲಿ ನೀಡಲಾದ ಅನುದಾನದ 95% ಅನ್ನು ಸರ್ಕಾರ ಸೂಕ್ತ ರೀತಿ ವಿನಿಯೋಗಿಸಿಕೊಂಡಿದೆ ಎಂದು ಇದೇ ಸಂದರ್ಭ ಅವರು ಸ್ಪಷ್ಟಪಡಿಸಿದರು.

2017ರ ಎಸ್‌ ಸಿಎಸ್‌ ಪಿ/ಟಿಎಸ್‌ ಪಿ ನಿಯಮದ ಅಡಿಯಲ್ಲಿ ಎಲ್ಲಾ ಇಲಾಖೆಗಳಿಗೆ ಮೊದಲ ತ್ರೈಮಾಸಿಕದಲ್ಲಿ ಕಂತು ಬಿಡುಗಡೆ ಮಾಡಲಾಗುವುದು ಎಂದ ಅವರು,  ಶೌಚಾಲಯ, ಸ್ನಾನ ಗೃಹಗಳ ನಿರ್ಮಾಣಕ್ಕಾಗಿ ಎಸ್‌ ಸಿ ಎಸ್‌ ಟಿ ಫಲಾನುಭವಿಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ತಲಾ 15 ಸಾವಿರ ರೂಪಾಯಿಯಿಂದ ತಲಾ 20,000 ರೂಪಾಯಿಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ