SDPI ಗೂಡಂಗಡಿ ಅಲ್ಲ, ನೋಂದಾಯಿತ ರಾಜಕೀಯ ಪಕ್ಷ: NIA ದಾಳಿ ವಿರುದ್ಧ SDPI ನಾಯಕರಿಂದ ಆಕ್ರೋಶ
ಮಂಗಳೂರು: ಇಂದು ಮುಂಜಾನೆ ಎಸ್ ಡಿಪಿಐ ಹಾಗೂ ಪಿಎಫ್ ಐ ನಾಯಕರ ಮೇಲೆ ಎನ್ ಐಎ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಎಸ್ ಡಿಪಿಐ ಮತ್ತು ಪಿಎಫ್ ಐ ನಾಯಕರು ಪತ್ರಿಕಾಗೋಷ್ಠಿ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಮಾಹಿತಿ ನೀಡದೇ, ಸಮನ್ಸ್ ನೀಡದೇ ದಾಳಿ ಮಾಡುತ್ತಿದ್ದಾರೆ. ಏಕಾಏಕಿ ನುಗ್ಗಿ ದಾಳಿ ನಡೆಸುತ್ತಿದ್ದಾರೆ. ನಿಮ್ಮನ್ನು ಜನರು ಒಂದು ದಿನ ಹಿಮ್ಮೆಟ್ಟಿಸುವ ಕಾಲ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಳಿ ನಡೆಸಲು ನಮ್ಮ ಕಚೇರಿಯಲ್ಲಿ ಕಳ್ಳಾಟ ನಡೆಯುತ್ತಿದೆಯಾ? ಶಾಸಕರು, ಸಚಿವರ ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಲಿ. ದಾಳಿ ನಡೆಸುವ ವೇಳೆ ನಮಗೆ ಕರೆ ಮಾಡಿ ಬೀಗ ತೆಗೆಯಲು ಹೇಳಬಹುದಿತ್ತಲ್ವಾ? ಚುನಾವಣಾ ನೋಂದಣಿ ಮಾಡಿದ ಕಚೇರಿ ಮೇಲೆ ದಾಳಿ ನಡೆಸಿರುವುದು ಅಹಂಕಾರದ್ದು. ರಾಜಕೀಯ ಉದ್ದೇಶಕ್ಕಾಗಿ ದಾಳಿ ನಡೆಸಲಾಗುತ್ತಿದೆ ಎಂದು ಎಸ್ ಡಿಪಿಐ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಡಿಪಿಐ ಗೂಡಂಗಡಿ ಅಲ್ಲ, ಇದೊಂದು ನೋಂದಾಯಿತ ರಾಜಕೀಯ ಪಕ್ಷ. ನಾವು ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ ನಮ್ಮನ್ನು ಅವರಿಗೆ ಸೈದ್ಧಾಂತಿಕವಾಗಿ ಎದುರಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 21 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಮಂಗಳೂರಲ್ಲಿ ಪಿಎಫ್ ಐನ ಆರು ಮಂದಿಯನ್ನು ಎನ್ ಐಎ ವಶಕ್ಕೆ ಪಡೆದಿದೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka