ಪಿಎಫ್ ಐ, ಎಸ್ ಡಿಪಿಐ ಮತ್ತು ಬಜರಂಗದಳವನ್ನು ಬ್ಯಾನ್ ಮಾಡಿ: ನಲಪಾಡ್
ರಾಯಚೂರು: ಪಿಎಫ್ ಐ, ಎಸ್ ಡಿಪಿಐ ಮತ್ತು ಬಜರಂಗದಳವನ್ನು ಬ್ಯಾನ್ ಮಾಡಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಒತ್ತಾಯಿಸಿದ್ದಾರೆ.
ಭಾರತ್ ಜೋಡೋ ಸಂಬಂಧ ರಾಯಚೂರುಗೆ ಭೇಟಿ ನೀಡಿದ ನಲಪಾಡ್, ನಾವು ಮೊದಲಿನಿಂದಲೂ ಈ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿದ್ದೇವೆ. ಕೋಮು ಸೌಹಾರ್ದ ಕೆಡಿಸುವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಭಯೋತ್ಪಾದನೆಗೆ ನಿರುದ್ಯೋಗ ಕಾರಣ ಎಂಬ ಹೇಳಿಕೆ ನಾನು ನೀಡಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ. ನಾನು ಹೇಳಿರುವುದರ ಉದ್ದೇಶ ಬೇರೆ ಇತ್ತು. ಕೆಲಸ ಸಿಗದ ಕಾರಣ, ಯುವಕರು ಇಂದು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka