ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ
ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ.
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯಾ ಕೆ. ಎ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕಳೆದ ಮಾರ್ಚ್ 9 ರಿಂದ 29ರವರೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ. ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಈ ರೀತಿ ಇದೆ.
ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
600 ಅಂಕ ಪಡೆದ ವಿದ್ಯಾರ್ಥಿ:
*ಅನನ್ಯಾ ಕೆ.ಎ 600 ಅಂಕ, ಆಳ್ವಾಸ್ ಕಾಲೇಜು ಮೂಡುಬಿದಿರೆ, ದಕ್ಷಿಣ ಕನ್ನಡ
596 ಅಂಕ ಪಡೆದ ವಿದ್ಯಾರ್ಥಿಗಳು:
*ಅನ್ವಿತಾ ಡಿ.ಎನ್, 596 ಅಂಕ, ವಿಕಾಸ್ ಕಂಪ್ ಪಿಯು ಕಾಲೇಜು ಶಿವಮೊಗ್ಗ
*ಛಾಯಾ ರವಿ ಕುಮಾರ್, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ ಬೆಂಗಳೂರು
*ಖುಷಿ ಬಾಗಲಕೋಟ್, 596 ಅಂಕ, ಎಕ್ಸ್‌ಲೆಂಟ್ ಪಿಯು ಕಾಲೇಜು ಮೂಡುಬಿದಿರೆ
*ಸ್ವಾತಿ ಪೈ 596 ಅಂಕ, ವಿಕಾಸ್ ಪಿಯು ಕಾಲೇಜು ಮಂಗಳೂರು
*ಧನ್ಯಶ್ರೀ ರಾವ್, 596 ಅಂಕ, ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
*ವರ್ಷಾ ಸತ್ಯನಾರಾಯಣ್, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು ಜಯನಗರ, ಬೆಂಗಳೂರು
*ಕೆ. ದಿಶಾ ರಾವ್, 596 ಅಂಕ, ಆಳ್ವಾಸ್ ಕಾಲೇಜ್ ಮೂಡುಬಿದಿರೆ
*ಇಂಚರಾ ಎನ್, 596 ಅಂಕ, ಎಎಸ್‌ಸಿ ಪಿಯು ಕಾಲೇಜ್, ಬೆಂಗಳೂರು
*ಗಾನ ಐ 596 ಅಂಕ ಕ್ರೈಸ್ಟ್ ಪಿಯು ಕಾಲೇಜ್, ಬೆಂಗಳೂರು
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw