ಮತ್ತೊಮ್ಮೆ ದಲಿತ ಸಚಿವರ ರಹಸ್ಯ ಸಭೆ!: ಸಿಎಂ, ಡಿಸಿಎಂ ದೆಹಲಿಗೆ ತೆರಳಿದ ಬೆನ್ನಲ್ಲೇ ಸಭೆ - Mahanayaka

ಮತ್ತೊಮ್ಮೆ ದಲಿತ ಸಚಿವರ ರಹಸ್ಯ ಸಭೆ!: ಸಿಎಂ, ಡಿಸಿಎಂ ದೆಹಲಿಗೆ ತೆರಳಿದ ಬೆನ್ನಲ್ಲೇ ಸಭೆ

dalit ministers
05/01/2024

ಬೆಂಗಳೂರು:  ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ಇನ್ನೂ ಜೀವಂತವಿರುವಾಗಲೇ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಹಾಗೂ ಸಚಿವ ರಾಜಣ್ಣ ರಹಸ್ಯ ಸಭೆ ನಡೆಸಿದ್ದಾರೆ.


Provided by

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಪರಮೇಶ್ವರ್ ಅವರ ನಿವಾಸದಲ್ಲಿ ರಹಸ್ಯ ಸಭೆ ನಡೆಸಲಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆದಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಪರಮೇಶ್ವರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರ ಮುಂದೆಯೂ ಯಾವುದೋ ವಿಚಾರದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿತ್ತು.


Provided by

ಇನ್ನೂ ದಲಿತ ಸಚಿವರ ರಹಸ್ಯ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಾ.ಹೆಚ್.ಸಿ.ಮಹದೇವಪ್ಪ, ಊಟಕ್ಕೆ ಕರೆದಿದ್ದರು ಬಂದಿದ್ದೇವೆ, ಒಳ್ಳೆಯ ಊಟ ಕೊಟ್ರು ಮಾಡಿದ್ದೇವೆ ಎಂದು ಹೇಳಿದರು.

ಉಳಿದವರು ಯಾಕೆ ಊಟಕ್ಕೆ ಬಂದಿಲ್ಲ ಗೊತ್ತಿಲ್ಲ, ಊಟಕ್ಕೆ ಆಹ್ವಾನ ನೀಡಿದ್ದರು ನಾನಂತೂ ಬಂದೆ, ಬೇರೆ ವಿಚಾರ ಗೊತ್ತಿಲ್ಲ ಎಂದರು.

ಇತ್ತೀಚಿನ ಸುದ್ದಿ