ಇಂದು ರಾತ್ರಿಯಿಂದಲೇ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಪ್ರತಿಭಟನಾ ಜಾಥಾ, ಮೆರವಣಿಗೆಗೆ ಅವಕಾಶ ಇಲ್ಲ: ಪೊಲೀಸ್ ಕಮಿಷನರ್ ದಯಾನಂದ್
ಬೆಂಗಳೂರು: ನಾಳೆ ಯಾವುದೇ ರೀತಿಯ ಪ್ರತಿಭಟನಾ ಜಾಥಾ, ಮೆರವಣಿಗೆಗೆ ಅವಕಾಶ ಇಲ್ಲ. ಇಂದು ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ದಯಾನಂದ್‌ಹೇಳಿದ್ದಾರೆ.
ಕೆಲವು ಸಂಘಟನೆಗಳು 29 ನೇ ತಾರೀಖು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಾಳೆ ಯಾವುದೇ ರೀತಿಯ ಪ್ರತಿಭಟನಾ ಜಾಥಾ, ಮೆರವಣಿಗೆಗೆ ಅವಕಾಶ ಇಲ್ಲ.
ನಗರದಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಕರ್ನಾಟಕ ಬಂದ್ ಕರೆ ನೀಡಿದವರಿಗೆ ನೋಟಿಸ್ ನೀಡಲಾಗುತ್ತದೆ.
ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ಆದೇಶದ ಪ್ರಕಾರ, ಬಂದ್ಗೆ ಕರೆ ನೀಡುವುದು ಕಾನೂನು ಬಾಹಿರ. ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯ ನಿರ್ವಹಿಸಲಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಬಂದ್ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಧಕ್ಕೆಯಾದ್ರೆ ಕರೆ ಕೊಟ್ಟವರೇ ಜವಾಬ್ದಾರರಾಗುತ್ತಾರೆ. ಆಸ್ತಿ ಪಾಸ್ತಿಗೆ ಧಕ್ಕೆಯಾದ್ರೆ ಬಂದ್ ಕರೆ ಕೊಟ್ಟುವರೇ ಭರಿಸಬೇಕು ಅಂತಾ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ಪ್ರತಿಭಟನಾಕಾರರು ವಾಹನಗಳಿಗೆ ಅಡ್ಡಿ, ಅಡಚಣೆ ಮಾಡಬಾರದು. ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಬಾರದು. ನಗರದಲ್ಲಿ ಎಲ್ಲಾ ಪೊಲೀಸರು ಬಂದೋಬಸ್ತ್ ನಲ್ಲಿ ಇರುತ್ತಾರೆ. ಕೆಎಸ್ಆರ್ ಪಿ, ಸಿಎಆರ್ ತುಕಡಿಗಳ ನಿಯೋಜನೆ ಇರುತ್ತೆ. 60 ಕೆಎಸ್ಆರ್ ಪಿ, 40 ಸಿಎಆರ್ ತುಕಡಿ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.