ವಿಧಾನಸಭೆ ಚುನಾವಣೆ ಹಿನ್ನಲೆ: ಕೊಟ್ಟಿಗೆಹಾರದಲ್ಲಿ ಭದ್ರತಾ ಸಿಬ್ಬಂದಿ ಪಥ ಸಂಚಲನ
ಕೊಟ್ಟಿಗೆಹಾರ: ವಿಧಾನ ಸಭೆ ಚುನಾವಣೆ ಪ್ರಯುಕ್ತ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ 50ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಮತ್ತು ಪೊಲೀಸರು ಸೋಮವಾರ ಸಿಪಿಐ ಸೋಮೇಗೌಡ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿದರು.
‘ಕಾನೂನು ಪಾಲನೆ ಹಾಗೂ ಶಾಂತಿ ಸುವ್ಯವಸ್ಥೆಯ ಹಿನ್ನಲೆಯಲ್ಲಿ ಜನರು ನಿರ್ಭಯವಾಗಿ ಮತ ಚಲಾಯಿಸಲು ಧೈರ್ಯ ತುಂಬುವ ಹಿತ ದೃಷ್ಟಿಯಿಂದ ಪಥ ಸಂಚಲನ ನಡೆಸಲಾಗಿದೆ’ ಎಂದು ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ತಿಳಿಸಿದ್ದಾರೆ.
ಸಬ್ ಇನ್ ಸ್ಪೆಕ್ಟರ್ ಗಳಾದ ರನ್ನಗೌಡ ಪಾಟೀಲ್, ಸಿ.ಸಿ.ಪವನ್ ಕುಮಾರ್, ಎಎಸ್ ಐ ಟಿ.ಕೆ.ಶಶಿ ಹಾಗೂ ಸಿಆರ್ ಪಿಎಫ್ ನ ಪಿಎಸ್ ಐ ಹಾಗೂ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw